ಕರ್ನಾಟಕ

karnataka

ETV Bharat / briefs

ಇಶಾಂತ್​ ಶರ್ಮಾರಂತೆ ಪೂಜಾರಗೂ ಐಪಿಎಲ್​​ನಲ್ಲಿ ಅವಕಾಶ ಕೊಡಬೇಕು: ಅನಿಲ್​ ಕುಂಬ್ಳೆ - BCCI

ಇಶಾಂತ್​ ಶರ್ಮಾ, ಚೇತೇಶ್ವರ್​ ಪೂಜಾರ ಭಾರತ ಟೆಸ್ಟ್​ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರಿಗೂ ಚುಟುಕು ಕ್ರಿಕೆಟ್​ನಲ್ಲೂ ಅವಕಾಶ ನೀಡಬೇಕೆಂದು ಅನಿಲ್​ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

anil

By

Published : Mar 27, 2019, 9:36 PM IST

ನವದೆಹಲಿ: ಇಶಾಂತ್​ ಶರ್ಮಾ ಹಾಗೂ ಚೇತೇಶ್ವರ್​ ಪೂಜಾರ ಐಪಿಎಲ್​ನಲ್ಲಿ ಆಡಲು ಅರ್ಹ ಆಟಗಾರರು ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ಭಾರತ ಕಂಡಂತಹ ಶ್ರೇಷ್ಠ ಸ್ಪಿನ್ನರ್​ ಅನಿಲ್​ ಕುಂಬ್ಳೆ ಅಭಿಪ್ರಾಯ ಪಟ್ಟಿದ್ದಾರೆ.

ಇಶಾಂತ್​ ಶರ್ಮಾ, ಚೇತೇಶ್ವರ್​ ಪೂಜಾರ ಭಾರತ ಟೆಸ್ಟ್​ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರಿಗೂ ಚುಟುಕು ಕ್ರಿಕೆಟ್​ನಲ್ಲೂ ಅವಕಾಶ ನೀಡಬೇಕು. ಇಶಾಂತ್​ಗೆ ಅವಕಾಶ ಸಿಕ್ಕಿದ್ದು, ಅವರು ತಮ್ಮ ಆಯ್ಕೆಯನ್ನು ಪ್ರದರ್ಶನದ ಮೂಲಕ ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಚೇತೇಶ್ವರ್​ ಪೂಜಾರಗೂ ಕೂಡ ಅವಕಾಶ ನೀಡಬೇಕೆಂದು ಕುಂಬ್ಳೆ ಹೇಳಿದ್ದಾರೆ.

ಇಶಾಂತ್​ರನ್ನು ​ಡೆಲ್ಲಿ ಕ್ಯಾಪಿಟಲ್​ ಒಂದು ಕೋಟಿ ನೀಡಿ ಖರೀದಿಸಿತ್ತು. ತಮ್ಮ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​ಶರ್ಮಾ, ಹಾಗೂ ಡಿ ಕಾಕ್​ ವಿಕೆಟ್​ ಹಾಗೂ ಚೆನ್ನೈ ವಿರುದ್ಧ ರಾಯುಡು ವಿಕೆಟ್​ ಪಡೆದು ಮಿಂಚಿದ್ದರು.

ಇಶಾಂತ್​ಗೆ ನೀಡಿದ ಹಾಗೇಯೇ ಪೂಜಾರಗೂ ಒಂದು ಅವಕಾಶ ನೀಡಿ ಎಂದಿರುವ ಕುಂಬ್ಳೆ ಯುವ ಆಟಗಾರರಾದ ಪೃಥ್ವಿ ಶಾ, ಪಂತ್​ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details