ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶವನ್ನೂ ಲೆಕ್ಕಿಸದೆ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿರುವ ಘಟನೆ ಕೆಂಗೇರಿ ವ್ಯಾಪ್ತಿಯಲ್ಲಿ ನಡೆದಿದೆ. ಕಾರಿಗೆ ಬ್ಲಾಕ್ ಫಿಲಂ ಅಳವಡಿಸಿ ಕಾರು ಚಾಲನೆ ಮಾಡಿದ್ದಾನೆ ಕಾರುಚಾಲಕ. ಇದನ್ನ ಗಮನಿಸಿದ ಕೆಂಗೇರಿ ಸಂಚಾರ ಪೊಲೀಸರು ಚಾಲಕನನ್ನ ತಡೆದು ಬ್ಲಾಕ್ ಫಿಲಂ ತೆಗೆದು, ಚಾಲಕನಿಗೆ ದಂಡ ವಿಧಿಸಿದ್ದಾರೆ.
ಏನಿದು ಬ್ಲಾಕ್ ಫಿಲಂ..?
ಬ್ಲಾಕ್ ಫಿಲಂ ಅಥವಾ ಟಿಂಟೆಡ್ ಗ್ಲಾಸ್ ಕರೆಯಲಾಗುವ ಇದನ್ನು ಕಾರ್ನ ಗ್ಲಾಸ್ಗಳಿಗೆ ಈ ಟಿಂಟೆಡ್ ಸ್ಕ್ರೀನ್ ರೀತಿ ಹಾಕಲಾಗುತ್ತೆ. ಇದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುವ ಕಾರಣ ಇದನ್ನ ತಡೆಗಟ್ಟಲು ಸುಪ್ರಿಂ ಕೋರ್ಟ್ ಈ ಹಿಂದೆಯೇ ನಿಷೇಧ ಹೇರಿತ್ತು.
ಸುಪ್ರೀಂ ಕೋರ್ಟ್ ಆದೇಶವನ್ನೂ ಲೆಕ್ಕಿಸದೆ ಟ್ರಾಫಿಕ್ ರೂಲ್ಸ್ ಉಲ್ಲಂಘನೆ - ಉಲ್ಲಂಘನೆ
ಬ್ಲಾಕ್ ಫಿಲಂ ಅಥವಾ ಟಿಂಟೆಡ್ ಗ್ಲಾಸ್ ಕರೆಯಲಾಗುವ ಇದನ್ನು ಕಾರ್ನ ಗ್ಲಾಸ್ಗಳಿಗೆ ಈ ಟಿಂಟೆಡ್ ಸ್ಕ್ರೀನ್ ರೀತಿ ಹಾಕಲಾಗುತ್ತೆ. ಇದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುವ ಕಾರಣ ಇದನ್ನ ತಡೆಗಟ್ಟಲು ಸುಪ್ರಿಂ ಕೋರ್ಟ್ ಈ ಹಿಂದೆಯೇ ನಿಷೇಧ ಹೇರಿತ್ತು.
ಟ್ರಾಫಿಕ್ ರೂಲ್ಸ್
ಅಲ್ಲದೆ ಕಾರನ್ನ ಖರೀದಿ ಮಾಡುವವರು ಈ ರೀತಿ ಟಿಂಟೆಡ್ ಗ್ಲಾಸ್ಗಳನ್ನ ತಾವಾಗಿಯೇ ಅಳವಡಿಸುವ ಹಾಗಿಲ್ಲ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ, ಅಲ್ಲದೆ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಇದೇ ಪ್ರಮುಖ ಕಾರಣ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಟಿಂಟೆಡ್ ಗ್ಲಾಸ್ ಅಳವಡಿಸಿ ಸಿಕ್ಕಿಹಾಕಿಕೊಂಡರೆ ಮೊದಲ ಬಾರಿಗೆ 100 ರೂ, ಎರಡನೇ ಬಾರಿ ಸಿಕ್ಕರೆ 500 ರೂ ದಂಡ ಎಂದು ಕೋರ್ಟ್ ಆದೇಶ ನೀಡಿತ್ತು.