ಕನೌಜ್(ಯುಪಿ): ಉತ್ತರಪ್ರದೇಶದ ಕನೌಜ್ನಲ್ಲಿ ಎಸ್ಪಿ, ಬಿಎಸ್ಪಿ ಹಾಗೂ ಆರ್ಎಲ್ಡಿ ನೇತೃತ್ವದಲ್ಲಿ ನಡೆಯುತ್ತಿದ್ದ ಮಹಾಘಟಬಂಧನ್ ರ‍್ಯಾಲಿಯ ವೇಳೆ ಏಕಾಏಕಿ ನುಗ್ಗಿರುವ ಹೋರಿಯೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಘಟನೆ ವರದಿಯಾಗಿದೆ. ಈ ವೇಳೆ ಸ್ಥಳದಲ್ಲಿ ಕೆಲ ಸಮಯ ಆತಂಕ ಮನೆ ಮಾಡಿತ್ತು.
ಮಹಾಘಟಬಂಧನ್ ರ‍್ಯಾಲಿ ವೇಳೆ ನುಗ್ಗಿದ ಹೋರಿ... ಸಿಟ್ಟಿಗೆದ್ದು ಏಕಾಏಕಿ ವೀಕ್ಷಕರ ಮೇಲೆ ದಾಳಿ! - ವಿಡಿಯೋ
ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಹೋರಿ ವ್ಯಕ್ತಿಯೊಬ್ಬನ ಮೇಲೆ ಗಂಭೀರವಾಗಿ ದಾಳಿ ನಡೆಸಿದೆ.
ರ‍್ಯಾಲಿ ವೇಳೆ ನುಗ್ಗಿದ ಹೋರಿ
ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಹೋರಿ ವ್ಯಕ್ತಿಯ ಮೇಲೆ ಗಂಭೀರವಾಗಿ ದಾಳಿ ನಡೆಸಿದೆ. ಹೋರಿ ಸಮಾರಂಭದಲ್ಲಿ ನೆರೆದವರತ್ತ ನುಗ್ಗುತ್ತಿದ್ದಂತೆ ವ್ಯಕ್ತಿವೋರ್ವ ಅದನ್ನ ತಡೆಯಲು ಮುನ್ನುಗ್ಗಿದ್ದಾನೆ. ಈ ವೇಳೆ ಆತನ ಮೇಲೆ ದಾಳಿ ನಡೆಸಿದೆ. ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿರುವ ಘಟನೆ ನಡೆದಿದೆ.
ಇದೇ ವಿಷಯವಾಗಿ ಮಾತನಾಡಿರುವ ಅಖಿಲೇಶ್ ಯಾದವ್ ,ಹದ್ರೊಯ್ನಿಂದ (ಪ್ರಧಾನಿ ಮೋದಿ)ಹೆಲಿಕಾಪ್ಟರ್ವೊಂದು ಬರುತ್ತಿದ್ದು,ಅದರ ವಿರುದ್ಧ ಹೋರಿ ಕೂಡ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿಸಿದರು.