ಲಂಡನ್:ಎಂಎಸ್ ಧೋನಿ ಜೊತೆ ಬ್ಯಾಟಿಂಗ್ ಆಡಬೇಕೆಂಬ ನನ್ನ ಕನಸು ವಿಶ್ವಕಪ್ನಲ್ಲಿ ನನಸಾಗುತ್ತಿದೆ ಎಂದು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಕನ್ನಡಿಗನಾಗಿರುವ ಕೆಎಲ್ ರಾಹುಲ್ ಸಂತೋಷವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ಗೂ ಮುನ್ನ ನಡೆದ ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ನಾಲ್ಕನೇ ಕ್ರಮಾಂಕಕ್ಕೆ ಪ್ರಭಲ ಪೈಪೋಟಿ ನೀಡುತ್ತಿರುವ ಕರ್ನಾಟಕದ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ಸೀನಿಯರ್ ವಿಕೆಟ್ ಕೀಪರ್ ಧೋನಿ ಜೊತೆ 164 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಕುಸಿತದಿಂದ ಪಾರುಮಾಡಿದ್ದಲ್ಲದೆ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದರು.
ಪಂದ್ಯದ ನಂತರ ಮಾಧ್ಯಮದ ಜೊತೆ ಮಾತನಾಡಿದ್ದ ರಾಹುಲ್ 84 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಕಠಿಣ ಪರಿಸ್ಥಿತಿಯಲ್ಲಿನಾನು ಮತ್ತು ಧೋನಿ ಹೆಚ್ಚೇನು ಮಾತನಾಡಿಕೊಳ್ಳದೆ ಉತ್ತಮ ಜೊತೆಯಾಟ ನೀಡಬೇಕೆಂದುಕೊಂಡು, ನಮ್ಮ ತಂತ್ರಗಾರಿಕೆಯನ್ನು ಬಳಸಿಕೊಂಡೆವು, ಇದು ಯಶಸ್ವಿಯಾಯಿತು ಎಂದರು.
ಮಾತು ಮುಂದುವರಿಸುತ್ತಾ," ಧೋನಿ ಜೊತೆ ಬ್ಯಾಟಿಂಗ್ ನಡೆಸಬೇಕೆಂಬುದು ನನ್ನ ಕನಸಾಗಿತ್ತು, ಆ ಅದೃಷ್ಟ ನನಗೆ ಅಭ್ಯಾಸ ಪಂದ್ಯದಲ್ಲಿ ಸಿಕ್ಕಿತು, ಅವರ ಜೊತೆ ಕೆಲವು ಓವರ್ಗಳ ಜೊತೆಯಾಟ ನಡೆಸಿ ತಂಡಕ್ಕೆ ನೆರವಾಗಿದ್ದು ನನಗೆ ಹೆಮ್ಮೆಯನ್ನಿಸುತ್ತರಿದೆ ಎಂದರಲ್ಲದೆ, ಧೋನಿ ಬ್ಯಾಟಿಂಗ್ ಮಾಡುವುದನ್ನು ನಾನ್ಸ್ಟ್ರೈಕರ್ನಲ್ಲಿ ನಿಂತು ನೋಡುವುದಕ್ಕೆ ತುಂಬಾ ಖುಷಿಯಾಗುತ್ತದೆ. ಅವರು ಸ್ಪಿನ್ನರ್ಗಳ ಎದುರು ಯಾವಾಗಲೂ ಸುಲಭವಾಗಿ ರನ್ಗಳಿಸುತ್ತಾರೆ, ಇದು ವಿಶ್ವಕಪ್ನಲ್ಲಿ ನಮ್ಮ ತಂಡಕ್ಕೆ ಬಲತಂದುಕೊಟ್ಟಿದೆ ಎಂದರು.
ಬಿಸಿಸಿಐ ಆಯ್ಕೆ ಸಮಿತಿ ಎರಡು-ಮೂರು ವರ್ಷಗಳಲ್ಲಿ ಸುಮಾರು 12 ಆಟಗಾರರನ್ನು 4 ನೇ ಕ್ರಮಾಂಕದಲ್ಲಿ ಬದಲಾಯಿಸಿತ್ತು. ಆದರೆ ಯಾರು ಯಶಸ್ವಿಯಾಗಲಿಲ್ಲ. ಇದೀಗ ರಾಹುಲ್ ಶತಕ ಸಿಡಿಸಿರುವುದರಿಂದ ನಾಲ್ಕನೇ ಕ್ರಮಾಂಕದ ಸಮಸ್ಯೆ ಬಹುಪಾಲು ಬಗೆಹರಿದಂತಾಗಿದೆ.