ಕುಷ್ಟಗಿ (ಕೊಪ್ಪಳ) :ಕೊರೊನಾ ಮುಂಜಾಗ್ರತಾ ಕ್ರಮವಾಗಿ ನಗರದ ಪೊಲೀಸ್ ಠಾಣೆ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ.
ಕುಷ್ಟಗಿ ಪೊಲೀಸ್ ಠಾಣೆ ಸುತ್ತ ಬ್ಯಾರಿಕೇಡ್ - ಕೊಪ್ಪಳ ಜಿಲ್ಲಾ ಸುದ್ದಿ
ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆ ಕುಷ್ಟಗಿ ನಗರ ಪೊಲೀಸ್ ಠಾಣೆಯ ಸುತ್ತ ಅನಗತ್ಯವಾಗಿ ಜನರ ಬರುವಿಕೆ ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿದೆ.
Barricades are installed around the Kushtagi police station
ಅನಗತ್ಯವಾಗಿ ಠಾಣೆಗೆ ಬರುವ ಸಾರ್ವಜನಿಕರಿಂದ ಸಿಬ್ಬಂದಿಗೆ ಕೋವಿಡ್-19 ವ್ಯಾಪಿಸದಿರಲು ಈ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ. ಈ ಕುರಿತು ಪ್ರಭಾರ ಪಿಎಸ್‌ಐ ಹೀರಪ್ಪ ನಾಯಕ್ ಪ್ರತಿಕ್ರಿಯಿಸಿ, ಸಿಪಿಐ ಅವರ ನಿರ್ದೇಶನದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.
ಇನ್ನುಂದೆ ಠಾಣೆಯ ಅವರಣದಲ್ಲಿ ಟೇಬಲ್ ಹಾಕಿ ದೂರು ಸ್ವೀಕರಿಸಲಾಗುತ್ತದೆ. ದೂರು ನೀಡಲು ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಸ್ಯಾನಿಟೈಸರ್ ಬಳಸಲು ಸೂಚಿಸಿಲಾಗುವುದು ಎಂದು ತಿಳಿಸಿದರು.