ಕರ್ನಾಟಕ

karnataka

ETV Bharat / briefs

ಅಬ್ಬರಿಸಿದ ರಸೆಲ್​, ಸಿಡಿದ ಹಾರ್ದಿಕ್...! ಸೂಪರ್​​​ ಸಂಡೇ ಪಂದ್ಯದಲ್ಲಿ ಗೆದ್ದು ಸೋತ ಮುಂಬೈ

ಸತತ ಆರು ಪಂದ್ಯಗಳನ್ನು ಸೋತಿದ್ದ ಕೆಕೆಆರ್​ ಮುಂಬೈ ಸೋಲಿಸಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಜೊತೆಗೆ ಪ್ಲೇ ಆಫ್​ ಸಾಧ್ಯತೆಯನ್ನೂ ಉಳಿಸಿಕೊಂಡಿದೆ.

ಮುಂಬೈ

By

Published : Apr 29, 2019, 7:44 AM IST

ಕೋಲ್ಕತ್ತಾ:ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ಕೆಕೆಆರ್​ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರನ್​​ ಹೊಳೆಯೇ ಹರಿದಿದೆ.

ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ನಿಗದಿತ 20 ಓವರ್​ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ಬರೋಬ್ಬರಿ 232 ರನ್​ ಗಳಿಸಿತು.

ಪ್ಲೇ ಆಫ್​​ಗೇರುವ ನಿಟ್ಟಿನಲ್ಲಿ ಕೆಕೆಆರ್​ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದ್ದ ಭಾನುವಾರದ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್​ ಗಿಲ್​​ 76(45), ಕ್ರಿಸ್ ಲಿನ್54(29), ಆಂಡ್ರೆ ರಸೆಲ್80(40) ಅಬ್ಬರ ಬ್ಯಾಟಿಂಗ್​​ನಿಂದ ಬೃಹತ್ ಮೊತ್ತ ಪೇರಿಸಿತು.

ಈ ಟಾರ್ಗೆಟ್ ಆರಂಭದಲ್ಲಿ ಮುಂಬೈ ಪಾಲಿಗೆ ಗೆಲುವು ಕಠಿಣ ಎಂದೇ ಪರಿಗಣಿಸಲಾದರೂ ನಂತರದಲ್ಲಿ ರೋಹಿತ್ ಪಡೆಗೆ ಗೆಲುವಿನ ಆಸೆ ಚಿಗುರಿತ್ತು.

ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದ ಮುಂಬೈ ತಂಡಕ್ಕೆ ಆರನೇ ವಿಕೆಟ್​ಗೆ ಬ್ಯಾಟಿಂಗ್​ಗೆ ಬಂದ ಹಾರ್ದಿಕ್ ಪಾಂಡ್ಯ ಅಕ್ಷರಶಃ ಅಬ್ಬರಿಸಿದರು. ಗೆಲುವಿನ ಆಸೆ ಬಿಟ್ಟಿದ್ದ ಮುಂಬೈ ಪಾಳಯದಲ್ಲಿ ಪಾಂಡ್ಯ ಗೆಲುವಿನ ಮಿಂಚು ಹರಿಸಿದರು.

ಕೇವಲ 34 ಎಸೆತದಲ್ಲಿ ಆಕರ್ಷಕ 91 ಬಾರಿಸಿದ ಪಾಂಡ್ಯ ಈ ಆವೃತ್ತಿಯ ವೇಗದ ಅರ್ಧ ಶತಕ(17 ಎಸೆತ) ಬಾರಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು.

ಪಾಂಡ್ಯ ಔಟಾಗುತ್ತಲೇ ಮುಂಬೈ ಗೆಲುವು ಕ್ಷೀಣವಾಯಿತು. ಕೊನೆಯಲ್ಲಿ 20 ಓವರ್​​ಗೆ ಏಳು ವಿಕೆಟ್ ನಷ್ಟಕ್ಕೆ 198 ರನ್​ ಗಳಿಸಿ 34 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಸತತ ಆರು ಪಂದ್ಯಗಳನ್ನು ಸೋತಿದ್ದ ಕೆಕೆಆರ್​ ಮುಂಬೈ ಸೋಲಿಸಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಜೊತೆಗೆ ಪ್ಲೇ ಆಫ್​ ಸಾಧ್ಯತೆಯನ್ನೂ ಉಳಿಸಿಕೊಂಡಿದೆ.

ABOUT THE AUTHOR

...view details