ಮುಂಬೈ:ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳ (ಜಿಸಿಎಂಎಂಎಫ್) ತನ್ನ 'ಅಮೂಲ್' ಬ್ರಾಂಡ್‌ನ ಹಾಲಿನ ದರಗಳನ್ನು 2 ರೂಪಾಯಿಗೆ ಏರಿಸಿದೆ. ಇದರಿಂದ ಗ್ರಾಹಕರ ಜೇಬು ಮತ್ತಷ್ಟು ಸುಡಲಿದೆ.
ಬಾಯಿ ಸುಡುತ್ತೆ ಅಮೂಲ್.. ಎಲ್ಲಾ ಉತ್ಪನ್ನಗಳ ಮೇಲೆ 2 ರೂ. ಹೆಚ್ಚಳ.. ನಾಳೆಯಿಂದ ಗ್ರಾಹಕರ ಜೇಬಿಗೆ ಕತ್ತರಿ! - ಹಾಲಿನ ದರ ಏರಿಕೆ
ದೇಶಾದ್ಯಂತ ಮಾರಾಟವಾಗುವ ಅಮೂಲ್ ಹಾಲಿನ ದರದಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ನಾಳೆಯಿಂದ ಗ್ರಾಹಕರು ಎರಡು ರೂ. ಹೆಚ್ಚುವರಿಯಾಗಿ ನೀಡಬೇಕಾಗಿದೆ.
ಹಾಲು ಉತ್ಪಾದನೆಯ ಪ್ರಮುಖ ಡೈರಿ ಕಂಪನಿಯಾದ ಅಮೂಲ್ ನಾಳೆಯಿಂದಲೇ ತನ್ನ ದರ ಏರಿಕೆ ಮಾಡುತ್ತಿದೆ. ಪ್ರತಿ ಲೀಟರ್ಗೆ ಗ್ರಾಹಕರು ಎರಡು ರೂ. ಹೆಚ್ಚಿಗೆ ನೀಡಬೇಕಾಗಿದೆ. ಹಾಲು ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮೂಲ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
ದೆಹಲಿ, ಮಹಾರಾಷ್ಟ್ರ,ಕೋಲ್ಕತಾ, ಗುಜರಾತ್ ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲೂ ಈ ಹಾಲು ಮಾರಾಟವಾಗುತ್ತಿದ್ದು, ಇದೀಗ ಗ್ರಾಹಕರು ಎರಡು ರೂ. ಹೆಚ್ಚುವರಿ ನೀಡಬೇಕಾಗಿದೆ. ಸದ್ಯ ದೇಶದಲ್ಲಿ ಅಮೂಲ್ ಗೋಲ್ಡ್ 27 ರೂ., ಅಮೂಲ್ ಶಕ್ತಿ 25 ರೂ., ಅಮೂಲ್ ತಾಜ್ 21 ರೂ ಹಾಗೂ ಅಮೂಲ್ ಡೈಮಂಡ್ 28 ರೂ. ದರವಿದೆ.