ಕರ್ನಾಟಕ

karnataka

ETV Bharat / briefs

ಬಿಜೆಪಿ ಐತಿಹಾಸಿಕ ಗೆಲುವು: ಮೋದಿ ಆಪ್ತ, ಬಲಗೈ ಬಂಟನಿಗೆ ಸಿಗುತ್ತಾ ಗೃಹ ಅಥವಾ ಹಣಕಾಸು ಖಾತೆ!? - ಅಮಿತ್​ ಶಾ

17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಜೋಡಿ ಮತ್ತೊಮ್ಮೆ ಅಬ್ಬರಿಸಿದ್ದು, ಅತಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಅಮಿತ್​ ಶಾ,ಮೋದಿ

By

Published : May 24, 2019, 6:42 PM IST

ನವದೆಹಲಿ: 17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಜೋಡಿ ಮತ್ತೊಮ್ಮೆ ಅಬ್ಬರಿಸಿದ್ದು, ಅತಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಬರೋಬ್ಬರಿ 353 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದು, ಬರುವ ಮೇ 30ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಾಧ್ಯತೆ ಇದೆ. ಇನ್ನು ಗುಜರಾತ್​ನ ಗಾಂಧಿನಗರದಿಂದ ಕಣಕ್ಕಿಳಿದಿದ್ದ ಅಮಿತ್​ ಶಾ 5 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ್ದು, ಈ ಸಲ ಸಚಿವ ಸ್ಥಾನ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಆಪ್ತ ಹಾಗೂ ಬಲಗೈ ಬಂಟನಾಗಿರುವ ಅಮಿತ್​ ಶಾ, ಪ್ರಮುಖ ಖಾತೆಗಳಾಗಿರುವ ಗೃಹ ಖಾತೆ ಅಥವಾ ಹಣಕಾಸು ಖಾತೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೀಗಾಗಿ ಈಗಾಗಲೇ ಅದೇ ಸ್ಥಾನದಲ್ಲಿರುವ ರಾಜನಾಥ್​ ಸಿಂಗ್ ಅಥವಾ ಅರುಣ್ ಜೇಟ್ಲಿಗೆ ಬೇರೆ ಖಾತೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಮೋದಿ ಕ್ಯಾಬಿನೆಟ್​ನಲ್ಲಿ ಹೊಸ ಹೊಸ ಮುಖಗಳಿಗೆ ಚಾನ್ಸ್​ ನೀಡಲು ಮುಂದಾಗಿದ್ದು, ಅಮಿತ್​ ಶಾ ಹಣಕಾಸು ಖಾತೆ ಕೈವಶ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ರಾಹುಲ್​ ಗಾಂಧಿ ವಿರುದ್ಧ ಗೆಲುವು ಸಾಧಿಸಿರುವ ಸ್ಮೃತಿ ಇರಾನಿ ಕೂಡ ದೊಡ್ಡ ಸ್ಥಾನ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದು, ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಕೂಡ ಹೊಸ ಖಾತೆ ಪಡೆದುಕೊಳ್ಳುವ ಚಾನ್ಸ್​ ಹೆಚ್ಚಾಗಿವೆ.

ABOUT THE AUTHOR

...view details