ಹೈದರಾಬಾದ್: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಬಾಲ್ಯದ ಎರಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಾವು ಯಾರೆಂಬುದು ಮುಖ್ಯವಲ್ಲ" ಎಂದು ಶೀರ್ಷಿಕೆ ಬರೆದಿದ್ದಾರೆ.
ಈ ಮುದ್ದಾದ ಫೋಟೋಗಳಿಗೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಬರಹಗಾರ-ಚಲನಚಿತ್ರ ನಿರ್ಮಾಪಕ ತಾಹಿರಾ ಕಶ್ಯಪ್, ಆಲಿಯಾ ತಾಯಿ ಸೋನಿ ರಜ್ದಾನ್ ಮತ್ತು ರಣಬೀರ್ ಕಪೂರ್ ಸಹೋದರಿ ರುಧಿಮಾ ಕಪೂರ್ ಸಹಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.