ಕರ್ನಾಟಕ

karnataka

ETV Bharat / briefs

ನದಿಯಲ್ಲಿ ಮುಳುಗಿ  8 ಮಂದಿ ಸಾವು, ಬಾಲಕಿಯ ರಕ್ಷಣೆಗೆ ಧಾವಿಸಿ ಪ್ರಾಣ ಬಿಟ್ಟ ಇಡೀ ಕುಟುಂಬ! - ದೇವಸ್ಥಾನ

ಲಭ್ಯವಾಗಿರುವ ಮಾಹಿತಿ ಪ್ರಕಾರ, ದೇವಸ್ಥಾನಕ್ಕೆ ಹೋಗಿದ್ದ ಕುಟುಂಬದ ಸದಸ್ಯರು ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಈ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಒಂದೇ ಕುಟುಂಬದ 8ಮಂದಿ ಸಾವು

By

Published : May 2, 2019, 6:41 PM IST

ರಾಜಘಡ(ಮಧ್ಯಪ್ರದೇಶ):ಒಂದೇ ಕುಟುಂಬದ 8 ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸುರಂಗಪುರದ ತಿರಂಗಿ ಗ್ರಾಮದ ಕಾಲಿಸಿಂಗ್​ ನದಿಯಲ್ಲಿ ನಡೆದಿದೆ.

ಒಂದೇ ಕುಟುಂಬದ 8ಮಂದಿ ಸಾವು

ಲಭ್ಯವಾಗಿರುವ ಮಾಹಿತಿ ಪ್ರಕಾರ, ದೇವಸ್ಥಾನಕ್ಕೆ ಹೋಗಿದ್ದ ಕುಟುಂಬದ ಸದಸ್ಯರು ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾರೆ. ಈ ವೇಳೆ ಓರ್ವ ಬಾಲಕಿ ನದಿಯಲ್ಲಿ ಮುಳುಗುತ್ತಿರುವುದನ್ನು ನೋಡಿರುವ ಇತರರು ಆಕೆಯ ರಕ್ಷಣೆಗಾಗಿ ಧಾವಿಸಿದ್ದಾರೆ. ಆದರೆ ನೀರಿನ ರಭಸ ಹೆಚ್ಚಿದ್ದರಿಂದ ಮರಳಿ ದಡಕ್ಕೆ ಬಾರಲಾಗದೇ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ. ಈಗಾಗಲೇ 7 ಮೃತದೇಹಗಳು ಪತ್ತೆಯಾಗಿದ್ದು, ಓರ್ವ ಬಾಲಕಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನ ಹೊರತೆಗೆದಿದ್ದಾರೆ. ಘಟನೆಯಲ್ಲಿ ಮೂವರು ಮಹಿಳೆಯರು, ಇಬ್ಬರು ಯುವಕರು ಹಾಗೂ ಮೂವರು ಹುಡುಗಿಯರು ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details