ಕರ್ನಾಟಕ

karnataka

ETV Bharat / briefs

ಇದು ಯಂಗೀಸ್ತಾನ್.. 7 ಆಟಗಾರರಿಗೆ ಚೊಚ್ಚಲ ವಿಶ್ವಕಪ್​- ಭಾರತ ತಂಡದಲ್ಲಿ 50 ಪಂದ್ಯ ಆಡಿಲ್ಲದ 6 ಪ್ಲೇಯರ್ಸ್! - ದೋನಿ

ವರ್ಲ್ಡ್‌ಕಪ್‌ನಲ್ಲಿ ಆಡುವ ಭಾರತ ತಂಡ ಸಮತೋಲಿತವಾಗಿದೆ. ಅದರಲ್ಲೂ ಯುವ ಆಟಗಾರರಿಗೆೆ ಆಯ್ಕೆ ಮಂಡಳಿ ಮಣೆ ಹಾಕಿರುವುದು ಸ್ಪಷ್ಟ. ಏಕದಿನ ಕ್ರಿಕೆಟ್​ನಲ್ಲಿ 50 ಪಂದ್ಯಗಳನ್ನಾಡಿದ 6 ಯುವಕರು 2019ರ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

world cup

By

Published : Apr 16, 2019, 8:00 PM IST

Updated : Apr 16, 2019, 8:21 PM IST

ಮುಂಬೈ: 2019 ರ ವಿಶ್ವಕಪ್​ಗೆ ಬಿಸಿಸಿಐ ಆಯ್ಕೆ ಸಮಿತಿ 2019ರ ವಿಶ್ವಕಪ್​ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ 7 ಆಟಗಾರರು ಚೊಚ್ಚಲ ವಿಶ್ವಕಪ್​ ಆಡುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸೀಮಿತ ಓವರ್​ಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಬುಮ್ರಾ, ಕುಲ್ದೀಪ್​ ಯಾದವ್​, ಕೇದಾರ್​ ಜಾಧವ್​,ಯಜುವೇಂದ್ರ ಚಹಾಲ್​,ಹಾರ್ದಿಕ್​ ಪಾಂಡ್ಯ,ವಿಜಯ್​ ಶಂಕರ್​ ಹಾಗೂ ಕೆಎಲ್​ ರಾಹುಲ್​ಗೆ ಇದು ಚೊಚ್ಚಲ ವಿಶ್ವಕಪ್​ ಆಗಿದೆ.

ಜಸ್ಪ್ರೀತ್​ ಬುಮ್ರಾ

ಏಕದಿನ ಕ್ರಿಕೆಟ್​ ಬೌಲಿಂಗ್​ ಶ್ರೇಯಾಂಕದಲ್ಲಿ ಜಸ್ಪ್ರೀತ್​ ಬುಮ್ರಾ ಮೊದಲ ಸ್ಥಾನದಲ್ಲಿದ್ದು, ಕಳೆದೆರಡು ವರ್ಷಗಳಿಂದ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಭಾರತ ತಂಡದ ಬೌಲಿಂಗ್​ನ ಆಧಾರ ಸ್ತಂಭವಾಗಿದ್ದಾರೆ. ಬುಮ್ರಾ 49 ಏಕದಿನ ಪಂದ್ಯಗಳಲ್ಲಿ ಭಾರತ ತಂಡ ಪ್ರತಿನಿಧಿಸಿದ್ದು 85 ವಿಕೆಟ್​ ಪಡೆದಿದ್ದಾರೆ. ಬುಮ್ರಾ 2016ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಕೆಎಲ್​ ರಾಹುಲ್​

ಕೇವಲ 14 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಕನ್ನಡಿದ ರಾಹುಲ್​ಗೆ ಇದು ಚೊಚ್ಚಲ ವಿಶ್ವಕಪ್​. ರಾಹುಲ್​ 13 ಇನ್ನಿಂಗ್ಸ್‌​ನಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದಾರೆ. 2016 ರಲ್ಲಿ ಏಕದಿನ ಕ್ರಿಕೆಟ್​ಗೆ ರಾಹುಲ್ ಪದಾರ್ಪಣೆ ಮಾಡಿದ್ದರು.

ವಿಜಯ್​ ಶಂಕರ್​

ತಮಿಳುನಾಡು ಮೂಲದ ವಿಜಯ್​ ಶಂಕರ್​ ಇದೇ ವರ್ಷ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್​ಗೆ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿದ್ದರು. ಅವರು ಕೇವಲ 9 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿಸಿಧಿಸಿದ್ದಾರೆ. ಇವರಿಗೆ ಆಲ್​ರೌಂಡರ್​ ಕೋಟಾದಲ್ಲಿ ವಿಶ್ವಕಪ್​ ಟಿಕೆಟ್​ ಗಿಟ್ಟಿಸಿಕೊಂಡಿದ್ದಾರೆ.

ಕುಲ್ದೀಪ್​ ಯಾದವ್​

ಭಾರತದ ಮಂಚೂಣಿ ಸ್ಪಿನ್​ ಬೌಲರ್​ ಆದ ಕುಲ್ದೀಪ್​ ಯಾದವ್ 44 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 87 ವಿಕೆಟ್​ ಪಡೆದಿದ್ದಾರೆ. ​ಯಾದವ್​ 2017 ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಹಾರ್ದಿಕ್​ ಪಾಂಡ್ಯ

ಆಲ್​ರೌಂಡರ್​ ಕೋಟಾದಲ್ಲಿ ಖಾಯಂ ಭಾರತ ತಂಡದ ಸದಸ್ಯನಾಗಿರುವ ಹಾರ್ದಿಕ್​ ಪಾಂಡ್ಯ 2016 ರಲ್ಲಿ ಏಕದಿನ ಕ್ರಿಕೆಟ್​ಗೆ ಎಂಟ್ರಿಕೊಟ್ಟಿದ್ದರು. ಪಾಂಡ್ಯ 45 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 4 ಅರ್ಧಶತಕ ಸಹಿತ 731 ರನ್​ ಸಿಡಿಸಿದ್ದಾರೆ. ಬೌಲಿಂಗ್​ನಲ್ಲಿ 44 ವಿಕೆಟ್​ ಕಿತ್ತಿದ್ದಾರೆ.

ಯಜುವೇಂದ್ರ ಚಹಾಲ್​

2016 ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಚಹಾಲ್​ ತಮ್ಮ ಸ್ಪಿನ್​ ಕೈಚಳಕದಿಂದ 41 ಪಂದ್ಯಗಳಿಂದ 72 ವಿಕೆಟ್​ ಪಡೆದಿದ್ದಾರೆ. 28 ವರ್ಷದ ಚಹಾಲ್​ಗೂ ಇದು ಮೊದಲನೇ ವಿಶ್ವಕಪ್​ ಆಗಿದೆ.

ಕೇದಾರ್​ ಜಾಧವ್​

34 ವರ್ಷದ ಕೇದಾರ್​ ಜಾಧವ್​ 2014ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಇವರು 59 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 102 ಸ್ಟ್ರೈಕ್​ರೇಟ್​ನಲ್ಲಿ 1174 ರನ್​ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 5 ಅರ್ದಶತಕ ಕೂಡ ಸೇರಿವೆ.

ಈ ಏಳು ಆಟಗಾರರೂ ಇದೇ ಮೊದಲ ಬಾರಿಗೆ ವಿಶ್ವಕಪ್ ಆಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕೇದಾರ್​ ಜಾಧವ್​ ಹೊರೆತುಪಡಿಸಿ ಎಲ್ಲರೂ 30 ವರ್ಷದೊಳಗಿರುವ ಆಟಗಾರರಾಗಿದ್ದಾರೆ. ಅಷ್ಟೇ ಅಲ್ಲದೆ ಜಾಧವ್​(59) ಮಾತ್ರ 50 ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಉಳಿದ 6 ಆಟಗಾರರು ಇನ್ನೂ 50 ಪಂದ್ಯಗಳ ಗಡಿ ದಾಟಿಲ್ಲ.

ಧೋನಿ ತಮ್ಮ 4 ನೇ ವಿಶ್ವಕಪ್​ ಆಡುತ್ತಿದ್ದರೆ, ರೋಹಿತ್​,ಕೊಹ್ಲಿ ಪಾಲಿಗಿದು 3 ನೇ ವಿಶ್ವಕಪ್​ ಆಗಿದೆ. ಕಾರ್ತಿಕ್ ​2007ರ ವಿಶ್ವಕಪ್​ನಲ್ಲಿ ಸ್ಥಾನ ಪಡೆದಿದ್ದರು. ಇದೀಗ 10 ವರ್ಷಗಳ ನಂತರ ಮತ್ತೆ ವಿಶ್ವಕಪ್​ ಟೀಮ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಭುವನೇಶ್ವರ್​, ಮೊಹಮ್ಮದ್​ ಶಮಿ, ರವೀಂದ್ರ ಜಡೇಜಾ ಹಾಗೂ ಶಿಖರ್​ ಧವನ್​ 2015ರ ವಿಶ್ವಕಪ್​ನಲ್ಲಿ ಆಡಿದ್ದರು.

Last Updated : Apr 16, 2019, 8:21 PM IST

ABOUT THE AUTHOR

...view details