ಲಂಡನ್:1975ರಿಂದ ಆರಂಭಗೊಂಡಿರುವ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೂ 11 ಮಹಾ ಟೂರ್ನಿಗಳು ನಡೆದಿದ್ದು, ಒಟ್ಟು 20 ತಂಡಗಳು ಭಾಗಿಯಾಗಿವೆ. ಆಸ್ಟ್ರೇಲಿಯಾ 5 ಬಾರಿ ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿದರೆ, ವೆಸ್ಟ್ ವಿಂಡೀಸ್ ಹಾಗೂ ಭಾರತ ತಲಾ 2 ಸಲ ಈ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಟ್ಟಿವೆ.
ವಿಶ್ವಕಪ್‌ನಲ್ಲಿ ಭಾಗಿಯಾಗಬೇಕೆಂಬುದು ವಿಶ್ವದ ಎಲ್ಲ ಕ್ರಿಕೆಟ್ ತಂಡಗಳ ಮಹದಾಸೆ. ಈ ಮಹತ್ವಾಕಾಂಕ್ಷಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕು ಎಂಬ ಆಸೆ ಹೊತ್ತು ಈ ಹಿಂದೆ ಭಾಗಿಯಾಗಿದ್ದ ನಾಲ್ಕು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳು ಮಾತ್ರ ಯಾವುದೇ ಗೆಲುವು ದಾಖಲಿಸದೆ ಬರಿಗೈಯಲ್ಲಿ ತೆರಳಿರುವುದು ವಿಪರ್ಯಾಸದ ಸಂಗತಿ.
ಸ್ಕಾಟ್ಲೆಂಡ್:
1999, 2007 ಹಾಗೂ 2015ರಲ್ಲಿ ಈ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಂಡಿತ್ತು. ಈ ಮೂರೂ ಟೂರ್ನಿಗಳಿಂದ ಒಟ್ಟು 14 ಪಂದ್ಯಗಳನ್ನಾಡಿದ ಈ ತಂಡ ಯಾವುದೇ ಪಂದ್ಯದಲ್ಲೂ ಗೆದ್ದಿಲ್ಲ. 2015ರಲ್ಲಿ ಆಫ್ಘಾನಿಸ್ತಾನದ ವಿರುದ್ಧ ಸ್ಕಾಟ್ಲೆಂಡ್ ಗೆಲುವಿನ ಸನಿಹ ಬಂದು ಮ್ಯಾಚ್ ಕೈಚೆಲ್ಲಿತ್ತು.
ಬರ್ಮುಡಾ: