ಮುಂಬೈ :19 ತಿಂಗಳ ಮಗುವಿಗೆ ಬೆನ್ನುಮೂಳೆ ಸ್ನಾಯು ಕ್ಷೀಣತೆ (spinal muscular atrophy ) ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ.
ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ ರೂ.. ನಗರದ ಅಶ್ಫಾಕ್ ಚೌಧರಿ, ಅಮ್ರಿನ್ ಚೌಧರಿ ಎಂಬುವರ ಪುತ್ರಿ ಜೈನಾಬ್. ಈ ಮಗುವಿಗೆ 19 ತಿಂಗಳಾದರೂ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
ತಪಾಸಣೆಗೆಂದು ಆಸ್ಪತ್ರೆಗೆ ಹೋದ ಬಳಿಕ ಮಗುವಿಗೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಸ್ವಿಸ್ ಫಾರ್ಮಾ ಕಂಪನಿಯಲ್ಲಿ ಲಭ್ಯವಿರುವ ಈ ಇಂಜೆಕ್ಷನ್ ಖರೀದಿಸಲು ಕ್ರೌಡ್ ಫಂಡಿಂಗ್ ನೆರವಿನೊಂದಿಗೆ ಸಾರ್ವಜನಿಕರಿಂದ ಪೋಷಕರು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ.
ನನ್ನ ಮಗಳ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ. ದಯವಿಟ್ಟು ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕಾಯಿಲೆಯಿಂದ ಬಳಲುತ್ತಿರುವ ಮಗುವಿಗಾಗಿ ಮಿಡಿದ ಶಿಲ್ಪಾ ಶೆಟ್ಟಿ: ಔಷಧಿಗೆ ಧನ ಸಹಾಯ ಮಾಡುವಂತೆ ಕೈಮುಗಿದು ಮನವಿ
ಇದೊಂದು ಅಪರೂಪದ ಕಾಯಿಲೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದಿದ್ದರೆ, ಮಕ್ಕಳ ಪ್ರಾಣ ಹೋಗಬಹುದು. ಈ ರೋಗದಿಂದ ಮಕ್ಕಳು ಮೇಲೇಳಲು, ಕುಳಿತುಕೊಳ್ಳಲು, ನಡೆಯಲು, ಉಸಿರಾಡಲು ಸಾಧ್ಯವಾಗುವುದಿಲ್ಲ ಎಂದು ವೈದ್ಯೆ ನೆಲು ದೇಸಾಯಿ ಹೇಳಿದ್ದಾರೆ.