ಕರ್ನಾಟಕ

karnataka

By

Published : Nov 9, 2020, 4:57 PM IST

Updated : Nov 9, 2020, 5:24 PM IST

ETV Bharat / bharat

ಈ ಗ್ರಾಮದ ಯುವಕರಿಗೆ ಇಲ್ಲ ಕಂಕಣ ಭಾಗ್ಯ... ಅಷ್ಟಕ್ಕೂ ಯಾಕೆ ಈ ಸಂಕಷ್ಟ?

ಗೋಪಾಲ್‌ಗಂಜ್‌ನ ರಾಮ್‌ಪುರ ಗ್ರಾಮದ ಜನರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಈ ಗ್ರಾಮದ ರಸ್ತೆ ಸರಿಯಾಗಿ ಇಲ್ಲದ ಕಾರಣ ಇಲ್ಲಿನ ಯುವಕರಿಗೆ ಮದುವೆಯೇ ಆಗುತ್ತಿಲ್ಲ. ಈ ಗ್ರಾಮದ ಅಭಿವೃದ್ಧಿಗಾಗಿ ಒಬ್ಬ ಅಭಿವೃದ್ಧಿಶೀಲ ವ್ಯಕ್ತಿಯ ಆಗಮನಕ್ಕಾಗಿ ಇಲ್ಲಿನ ಜನರು ಇನ್ನೂ ಕಾಯುತ್ತಿದ್ದಾರೆ.

ರಾಮ್​ಪುರ್​ ಗ್ರಾಮಕ್ಕಿಲ್ಲ ಮೂಲಭೂತ ಸೌಕರ್ಯಗಳು
ರಾಮ್​ಪುರ್​ ಗ್ರಾಮಕ್ಕಿಲ್ಲ ಮೂಲಭೂತ ಸೌಕರ್ಯಗಳು

ಗೋಪಾಲ್‌ಗಂಜ್ (ಬಿಹಾರ): ಜಿಲ್ಲೆಯ ಬರೌಲಿ ಬ್ಲಾಕ್​ನ ಬಾಗೇಜಿ ಪಂಚಾಯತ್​ನ ರಾಮ್​ಪುರ್​ ಗ್ರಾಮದಲ್ಲಿನ ಅನೇಕ ಯುವಕರಿಗೆ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ. ಕಾರಣ ಈ ಗ್ರಾಮದ ರಸ್ತೆ ಸರಿಯಾಗಿಲ್ಲದಿರುವುದು.

ಈ ಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ರಸ್ತೆಯ ಸ್ಥಿತಿಯಂತೂ ಹೇಳತೀರದಾಗಿದೆ. ಇದರ ಹೊರತಾಗಿಯೂ ಶಿಕ್ಷಣ ಮತ್ತು ಆಸ್ಪತ್ರೆಯ ಕೊರತೆಯೂ ಇದೆ. ಈ ಎಲ್ಲ ಕಾರಣದಿಂದ ಗ್ರಾಮದ ಯುವಕರಿಗೆ ಮದುವೆ ನಿಶ್ಚಯವಾದರೂ, ಬಳಿಕ ಮುರಿದು ಬೀಳುತ್ತಿದೆ.

ರಾಮ್​ಪುರ್​ ಗ್ರಾಮಕ್ಕಿಲ್ಲ ಮೂಲ ಸೌಕರ್ಯಗಳು.... ಹೆಣ್ಣುಕೊಡಲು ಜನರ ಹಿಂದೇಟು

ಗ್ರಾಮದಲ್ಲಿ ರಸ್ತೆ ಸರಿಯಿಲ್ಲದ ಕಾರಣ ಯಾವುದೇ ವಾಹನ ಗ್ರಾಮಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ ರೋಗಿಗಳನ್ನು ಅಲ್ಲಿನ ಜನರೇ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದ ಮೇಲೂ ನಮ್ಮ ಜನ ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ನಿಜಕ್ಕೂ ಶೋಚನಿಯ ಸಂಗತಿಯಾಗಿದೆ.

ಒಬ್ಬ ವ್ಯಕ್ತಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಸುಮಾರು ಎರಡೂವರೆಯಿಂದ ಮೂರು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ಇನ್ನೂ ಮೂಲ ಸೌಕರ್ಯಗಳು ಮರಿಚಿಕೆಯಾಗಿವೆ.

ರಾಮ್​ಪುರ್​ ಗ್ರಾಮಕ್ಕಿಲ್ಲ ಮೂಲ ಸೌಕರ್ಯಗಳು

ಚುನಾವಣೆಯ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಮತ್ತು ನಾಯಕರು ಮತಕೇಳಲು ಈ ಗ್ರಾಮಕ್ಕೆ ಬಂದು, ಸೌಲಭ್ಯಗಳನ್ನು ನೀಡುವ ಭರವಸೆ ನೀಡಿ ಹೋಗುತ್ತಾರೆ. ಆದ್ರೆ ಗೆದ್ದ ಬಳಿಕ ಯಾರೊಬ್ಬರು ಇತ್ತಾ ಸುಳಿಯುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

Last Updated : Nov 9, 2020, 5:24 PM IST

ABOUT THE AUTHOR

...view details