ಕರ್ನಾಟಕ

karnataka

ETV Bharat / bharat

ಖಾಕಿ ದರ್ಪಕ್ಕೆ ಕಾಲು ಕಳೆದುಕೊಂಡ ತರಕಾರಿ ಮಾರುವ ಯುವಕ

ಯುವಕನ ಮೇಲೆ ರೈಲು ಹರಿದು ಆತ ಎರಡೂ ಕಾಲು ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

young man lost his leg in a train accident at Uttara Pradesh
ಖಾಕಿ ದರ್ಪಕ್ಕೆ ಕಾಲು ಕಳೆದುಕೊಂಡ ತರಕಾರಿ ಮಾರುವ ಯುವಕ

By

Published : Dec 4, 2022, 1:22 PM IST

ಕಾನ್ಪುರ(ಉತ್ತರ ಪ್ರದೇಶ):ತರಕಾರಿ ವ್ಯಾಪಾರಿಯೊಬ್ಬರು ರೈಲಿಗೆ ಸಿಲುಕಿ ತಮ್ಮ ಕಾಲು ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅರ್ಸಲನ್ ಎ.ಕೆ.ಎ ಲಡ್ಡು(17) ಗಾಯಗೊಂಡ ಯುವಕ. ಎರಡೂ ಕಾಲುಗಳು ತುಂಡಾಗಿದ್ದರಿಂದ ಅಧಿಕ ರಕ್ತಸ್ರಾವವಾಗಿ ಅರ್ಸಲನ್ ಸ್ಥಿತಿ ಗಂಭೀರವಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (SGPGIMS)ಗೆ ದಾಖಲಿಸಲಾಗಿದೆ.

ರಸ್ತೆ ಬದಿಯಲ್ಲಿ ಅರ್ಸಲನ್ ತರಕಾರಿ ಮಾರಾಟ ಮಾಡುತ್ತಿದ್ದಾಗ ಸಬ್‌ಇನ್ಸ್‌ಪೆಕ್ಟರ್ ಶಾದಾಬ್ ಖಾನ್ ಮತ್ತು ಹೆಡ್ ಕಾನ್‌ಸ್ಟೆಬಲ್ ರಾಕೇಶ್ ಕುಮಾರ್ ಅನುಚಿತವಾಗಿ ವರ್ತಿಸಿ ತಕ್ಕಡಿಯನ್ನು ರೈಲ್ವೆ ಹಳಿ ಮೇಲೆ ಎಸೆದಿದ್ದರು. ಇದನ್ನು ಎತ್ತಿಕೊಳ್ಳಲು ಹೋದಾಗ ಅಚಾನಕ್ಕಾಗಿ ರೈಲು ಬಂದು ಅರ್ಸಲನ್ ಮೇಲೆ ಹರಿದಿದೆ. ಇದರಿಂದ ಯುವಕ ಎರಡೂ ಕಾಲು ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಪೊಲೀಸ್ ಆಯುಕ್ತ ವಿಜಯ್ ಧುಲ್ ಅವರು ಹೆಡ್ ಕಾನ್‌ಸ್ಟೇಬಲ್‌ ಅನ್ನು ಅಮಾನತುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ತರಕಾರಿ ಮಾರಾಟಗಾರನನ್ನು ಥಳಿಸಿ ನಂತರ ಅವನ ಮಾಪಕವನ್ನು ರೈಲ್ವೆ ಹಳಿ ಮೇಲೆ ಎಸೆಯಲಾಗಿದೆ ಎಂಬ ಆರೋಪ ನಿಜವೆಂದು ಕಂಡುಬಂದಿದೆ. ಜೊತೆಗಿದ್ದ ಸಬ್ ಇನ್ಸ್ ಪೆಕ್ಟರ್ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ:ಮೃತದೇಹಗಳ ಡಂಪಿಂಗ್ ವಲಯವಾಗಿ ಪರಿವರ್ತನೆ ಆಗಿದೆ ಯಮುನಾ ಎಕ್ಸ್‌ಪ್ರೆಸ್‌ವೇ.. ಕಾರಣ?

ABOUT THE AUTHOR

...view details