ಕರ್ನಾಟಕ

karnataka

ಹೈದರಾಬಾದ್​​ನಲ್ಲಿ ವಿಶ್ವದ ಅತಿ ದೊಡ್ಡ ಬ್ಯಾಟ್‌ ಅನಾವರಣ

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಬ್ಯಾಟ್ ಅನ್ನು ತೆಲಂಗಾಣ ಪುರಸಭೆಯ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಮತ್ತು ಐಟಿ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ಅವರು ಟ್ಯಾಂಕ್ ಬಂಡ್ ಮೇಲೆ ಅನಾವರಣಗೊಳಿಸಿದರು.

By

Published : Oct 24, 2021, 4:54 PM IST

Published : Oct 24, 2021, 4:54 PM IST

ETV Bharat / bharat

ಹೈದರಾಬಾದ್​​ನಲ್ಲಿ ವಿಶ್ವದ ಅತಿ ದೊಡ್ಡ ಬ್ಯಾಟ್‌ ಅನಾವರಣ

ವಿಶ್ವದ ಅತಿ ದೊಡ್ಡ ಬ್ಯಾಟ್‌ ಅನಾವರಣ
ವಿಶ್ವದ ಅತಿ ದೊಡ್ಡ ಬ್ಯಾಟ್‌ ಅನಾವರಣ

ಹೈದರಾಬಾದ್:ವಿಶ್ವದ ಅತಿ ದೊಡ್ಡ ಕ್ರಿಕೆಟ್ ಬ್ಯಾಟ್, ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣಪತ್ರ ನೀಡಿರುವ ಕ್ರಿಕೆಟ್ ಬ್ಯಾಟ್ ಅನ್ನು ಹೈದರಾಬಾದ್​​ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಬ್ಯಾಟ್​​ಅನ್ನು ತೆಲಂಗಾಣ ಪುರಸಭೆಯ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಮತ್ತು ಐಟಿ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ಅವರು ಟ್ಯಾಂಕ್ ಬಂಡ್ ಮೇಲೆ ಅನಾವರಣಗೊಳಿಸಿದರು.

ತೆಲಂಗಾಣ ಸರ್ಕಾರಕ್ಕೆ ಪಾನೀಯ ಕಂಪೆನಿ ಪೆರ್ನೊಡ್ ರಿಚರ್ಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಈ ಕ್ರಿಕೆಟ್ ಬ್ಯಾಟನ್ನು ಉಡುಗೊರೆಯಾಗಿ ನೀಡಿದೆ. ಈ ಬ್ಯಾಟ್ 56.1 ಅಡಿ ಉದ್ದ ಮತ್ತು 9 ಸಾವಿರ ಕೆಜಿ ತೂಕವಿದೆ. ನವೆಂಬರ್ 15ರವರೆಗೆ ಇದನ್ನು ಟ್ಯಾಂಕ್ ಬಂಡ್​​ನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಸಂಡೆ-ಫಂಡೆ ಕಾರ್ಯಕ್ರಮಕ್ಕೆ ಇದು ಅತ್ಯಾಕರ್ಷಣೆಯಾಗಿದೆ. ನಂತರ ಉಪ್ಪಲ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

ಇದನ್ನೂ ಓದಿ: 14 ವರ್ಷಗಳ ನಂತರ ಬೆಂಕಿ ಪೊಟ್ಟಣದ ಬೆಲೆ ಏರಿಕೆ: ದ್ವಿಗುಣಗೊಳ್ಳಲಿದೆ ಮ್ಯಾಚ್‌ಬಾಕ್ಸ್‌ ರೇಟ್​

ಐಸಿಸಿ ಪುರುಷರ ಟಿ20 ವಿಶ್ವಕಪ್ ಸಮಯದಲ್ಲಿ ಈ ಕ್ರಿಕೆಟ್ ಬ್ಯಾಟ್ಅನ್ನು ಅನಾವರಣಗೊಳಿಸಲಾಗಿದ್ದು, ಪೆರ್ನೊಡ್ ರಿಚರ್ಡ್ ಈ ಬ್ಯಾಟ್ ಅನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಸಮರ್ಪಿಸಿದರು. ಪಾಪ್ಲರ್ ಮರದಿಂದ ಇದನ್ನು ತಯಾರಿಸಲಾಗಿದ್ದು, ಒಂದು ತಿಂಗಳ ಕಾಲ ಇದನ್ನು ತಯಾರಿಸಲಾಗಿದೆ. ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಉಪಸ್ಥಿತರಿದ್ದರು.

ABOUT THE AUTHOR

...view details