ಕರ್ನಾಟಕ

karnataka

ETV Bharat / bharat

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

WOMAN DEAD BODY FOUND HANGING
WOMAN DEAD BODY FOUND HANGING

By

Published : Sep 30, 2021, 5:15 PM IST

ಸಿದ್ಧಾರ್ಥ​ನಗರ(ಉತ್ತರ ಪ್ರದೇಶ):ನವವಿವಾಹಿತೆಯೋರ್ವಳ ಮೃತದೇಹ ಮನೆಯಲ್ಲಿನ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ 21 ವರ್ಷದ ರಿಮಾ ಈ ನಿರ್ಧಾರ ಕೈಗೊಂಡಿದ್ದಾಳೆ.

ಇದನ್ನೂ ಓದಿ:ನಾನವನಲ್ಲ.. ನನಗೆ ಟ್ಯಾಗ್​ ಮಾಡುವುದು ದಯವಿಟ್ಟು ನಿಲ್ಲಿಸಿ: ಗೋಲ್​​ಕೀಪರ್​​ 'ಅಮರೀಂದರ್​ ಸಿಂಗ್​' ಮನವಿ

21 ವರ್ಷದ ರೀಮಾ ಸಿದ್ಧಾರ್ಥನಗರ ಜಿಲ್ಲೆಯ ನಿವಾಸಿಯಾಗಿದ್ದು, 2020ರ ಜೂನ್ ತಿಂಗಳಳ್ಲಿ ಸದರ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಿವಾಸಿ ಸುಭಾಷ್​​ ಯಾದವ್ ಜೊತೆ ಮದುವೆ ಮಾಡಿಸಲಾಗಿತ್ತು. ಈ ವೇಳೆ ಹೆಚ್ಚಿನ ವರದಕ್ಷಿಣೆ ನೀಡಿದ್ದರು. ಬರುವ ದಿನಗಳಲ್ಲಿ ಚಿನ್ನದ ಚೈನ್​ ನೀಡುವ ಭರವಸೆ ಸಹ ನೀಡಿದ್ದರು. ಆದರೆ ಬಡತನದಿಂದಾಗಿ ಇದು ಸಾಧ್ಯವಾಗಿರಲಿಲ್ಲ.

ಈ ವಿಷಯವನ್ನಿಟ್ಟುಕೊಂಡು ರಿಮಾಗೆ ಆಕೆಯ ಅತ್ತೆ ಹಾಗೂ ಗಂಡನ ಮನೆಯವರು ಪ್ರತಿದಿನ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಇದರ ಬೆನ್ನಲ್ಲೇ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ದೂರು ದಾಖಲು ಮಾಡಿದ್ದಾರೆ.

ABOUT THE AUTHOR

...view details