ಕರ್ನಾಟಕ

karnataka

ETV Bharat / bharat

ರಸ್ತೆ ಅಪಘಾತದಲ್ಲಿ ಗರ್ಭಿಣಿ ಹೊಟ್ಟೆ ಮೇಲೆ ಹರಿದ ವಾಹನ.. ಶಿಶು, ತಾಯಿ ಸಾವು - ಅಪಘಾತದಲ್ಲಿ ಗರ್ಭಿಣಿ ಸಾವು

ಗಂಡನೊಂದಿಗೆ ಗರ್ಭಿಣಿ ಬೈಕ್​ ಮೇಲೆ ತೆರಳುತ್ತಿದ್ದ ವೇಳೆ ಅಪಘಾತಕ್ಕೊಳಗಾದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

woman and baby died road accident
woman and baby died road accident

By

Published : Jun 21, 2021, 9:17 PM IST

ಚಿತ್ತೋರಗಢ(ರಾಜಸ್ಥಾನ): ಗಂಗರಾರ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದಿದ್ದು, ಸಂಜೆ ವೇಳೆ ನಡೆದ ಈ ಅವಘಡದಲ್ಲಿ ಗರ್ಭಿಣಿ ಹಾಗೂ ನವಜಾತ ಶಿಶು ಸಾವನ್ನಪ್ಪಿದೆ. ಉಳಿದಂತೆ ಪತಿ ಹಾಗೂ ಏಳು ವರ್ಷದ ಮಗು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಸ್ತೆ ಅಪಘಾತದ ವೇಳೆ ಗರ್ಭಿಣಿ ಸಾವು

ಸಂಜೆ ವೇಳೆ ಬೈಕ್ ಮೇಲೆ ತೆರಳುತ್ತಿದ್ದಾಗ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಗರ್ಭಿಣಿ ಹೊಟ್ಟೆ ಮೇಲೆ ಅದು ಹರಿದು ಹೋಗಿರುವ ಕಾರಣ ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಹೊಟ್ಟೆಯಲ್ಲಿ ನವಜಾತ ಶಿಶುವಿದ್ದ ಕಾರಣ ಸ್ಥಳಕ್ಕೆ ವೈದ್ಯರು ಆಗಮಿಸಿದ್ದಾರೆ. ಆದರೆ, ಅದು ಕೂಡ ದುರ್ಘಟನೆಯಲ್ಲಿ ಸಾವನ್ನಪ್ಪಿದೆ. ಇನ್ನು ಬೈಕ್​ನಲ್ಲಿದ್ದ ಏಳು ವರ್ಷದ ಮಗು ಹಾಗೂ ಆಕೆಯ ಗಂಡ ಗಾಯಗೊಂಡಿದ್ದಾರೆ.

ಇದನ್ನೂ ಓದಿರಿ: ದೇಶಾದ್ಯಂತ ಒಂದೇ ದಿನ 47 ಲಕ್ಷ ಕೋವಿಡ್​ ವ್ಯಾಕ್ಸಿನ್​; ಅಭಿನಂದನೆ ಸಲ್ಲಿಸಿದ ನಮೋ

ಲಭ್ಯವಾಗಿರುವ ಮಾಹಿತಿ ಪ್ರಕಾರ, ನಗರದ ಧೋಲಿ ಮೊಹಲ್ಲಾ ನಿವಾಸಿ ಬಾಲರಾಜ್​ ತನ್ನ ಗರ್ಭಿಣಿ ಪತ್ನಿ ಹೆಮಲತಾ ಮತ್ತು ಏಳು ವರ್ಷ ಮಗನೊಂದಿಗೆ ಗಂಗರಾರ್​​ನಿಂದ ಚಿತ್ತೋರಗಢ ಕಡೆಗೆ ಬರುತ್ತಿದ್ದರು.


ಈ ವೇಳೆ ಹಿಂದಿನಿಂದ ಬಂದ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ರಸ್ತೆಯಲ್ಲಿ ಬಿದ್ದಿದ್ದು, ಆಕೆಯ ಹೊಟ್ಟೆಯ ಮೇಲೆ ಹರಿದು ಹೋಗಿದೆ. ಹೊಟ್ಟೆ ಮೇಲೆ ಹರಿದ ಕಾರಣ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಶಿಶು ಉಸಿರಾಡುತ್ತಿದ್ದ ಕಾರಣ ಸ್ಥಳಕ್ಕೆ ವೈದ್ಯರು ಆಗಮಿಸಿ, ಚಿಕಿತ್ಸೆ ನೀಡುವ ಕೆಲಸ ಮಾಡಿದ್ದಾರೆ. ಆದರೆ ಅದು ಸಾವನ್ನಪ್ಪಿದೆ ಎಂದು ತದನಂತರ ಘೋಷಣೆ ಮಾಡಿದ್ದಾರೆ.

ಭೀಕರ ರಸ್ತೆ ಅಪಘಾತ

ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details