ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯನ್ನು ಕಾಂಗ್ರೆಸ್ ಕೋಟೆ ಎಂದು ಪರಿಗಣಿಸಲಾಗುತ್ತಿತ್ತು. ಜೊತೆಗೆ ಜಿಲ್ಲೆಯ ಸಂಸದ ದಿವಂಗತ ಗನಿ ಖಾನ್ ಚೌಧರಿ ಅವರ ಕೋಟೆ ಎಂದು ಹೆಚ್ಚು ಹೇಳಲಾಗಿತ್ತು. ಆ ಜಿಲ್ಲೆಯ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 29 ರಂದು ಮತದಾನ ನಡೆದಿದ್ದು, ಶಾಂತಿಯುತವಾಗಿ ಕೊನೆಯ ಹಂತದಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ.
ಗಣಿ ಖಾನ್ ಚೌಧರಿ ಅವರ ವರ್ಚಸ್ಸಿನಿಂದಾಗಿ, ಅವರ ಮರಣದ ನಂತರವೂ, ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಸ್ವಲ್ಪ ಸಮಯದವರೆಗೆ ತನ್ನ ವರ್ಚಸ್ಸು ಉಳಿಸಿಕೊಂಡಿದೆ. ಖಾನ್ ಸಾವಿಗೆ ಮುನ್ನ ಅವರ ಸಹೋದರಿ ರೂಬಿ ನೂರ್ ಹೊರತು ಪಡಿಸಿ ಖಾನ್ ಕುಟುಂಬದಿಂದ ಯಾರೂ ರಾಜಕೀಯದಲ್ಲಿ ಸಕ್ರಿಯರಾಗಿರಲ್ಲ. ಆದರೆ, ಅವರ ಮರಣದ ನಂತರ ಅದೇ ಕುಟುಂಬವು ಆ ಜಿಲ್ಲೆಯ ಅನೇಕ ಸಂಸದರು ಮತ್ತು ಶಾಸಕರನ್ನು ಉಡುಗೊರೆಯಾಗಿ ನೀಡಿತು. ಗಣಿ ಖಾನ್ ಚೌಧರಿಯವರ ಇಬ್ಬರು ಸಹೋದರರು, ಒಬ್ಬ ಸೋದರಳಿಯ ಮತ್ತು ಒಬ್ಬ ಸೋದರ ಸೊಸೆ ಸೇರಿ ಎಲ್ಲರೂ ಸದ್ಯ ರಾಜಕಾರಣದಲ್ಲಿ ಬ್ಯೂಸಿಯಾಗಿದ್ದಾರೆ. ದಿವಂಗತ ನಾಯಕನೊಬ್ಬನ ವರ್ಚಸ್ಸು ಅವರ ಕುಟುಂಬ ಸದಸ್ಯರಿಗೆ ದೀರ್ಘಕಾಲದವರೆಗೆ ವಿವಿಧ ಚುನಾವಣೆಗಳಲ್ಲಿ ಜಯಗಳಿಸಲು ಸಹಾಯ ಮಾಡುವುದು ಬಹಳ ಅಪರೂಪ.