ಕರ್ನಾಟಕ

karnataka

ETV Bharat / bharat

ಜಿ20ಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವವನ್ನು ಭಾರತ ಬಯಸುವುದೇಕೆ? - ಪ್ರಧಾನಿ ನರೇಂದ್ರ ಮೋದಿ

ಭಾರತದ ಅಧ್ಯಕ್ಷತೆಯಲ್ಲಿ ಐತಿಹಾಸಿಕ ಜಿ-20 ಶೃಂಗಸಭೆ ನಾಳೆ ಮತ್ತು ನಾಡಿದ್ದು (ಸೆಪ್ಟೆಂಬರ್‌ 9,10) ನಡೆಯಲಿದೆ. ಭಾರತವು ಈ ಒಕ್ಕೂಟದಲ್ಲಿ ಆಫ್ರಿಕನ್ ರಾಷ್ಟ್ರಗಳ ಸದಸ್ಯತ್ವವನ್ನು ಆದ್ಯತೆಯಾಗಿ ಪರಿಗಣಿಸಲು ಮುಂದಾಗಿದೆ.

why-india-wants-permanent-membership-of-african-union-in-g20
ಜಿ20ಯಲ್ಲಿ ಆಫ್ರಿಕನ್ ಒಕ್ಕೂಟದ ಶಾಶ್ವತ ಸದಸ್ಯತ್ವವನ್ನು ಭಾರತ ಏಕೆ ಬಯಸುತ್ತದೆ ?

By ETV Bharat Karnataka Team

Published : Sep 8, 2023, 6:39 AM IST

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ಐತಿಹಾಸಿಕ ಜಿ-20 ಶೃಂಗಸಭೆ ನವದೆಹಲಿಯಲ್ಲಿ ನಾಳೆಯಿಂದ 2 ದಿನ ನಡೆಯಲಿದೆ. ರಾಜಧಾನಿಯಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿರುವ ಜಾಗತಿಕ ವೇದಿಕೆಯೇ ಜಿ20. ಇದರಲ್ಲಿ ಆಫ್ರಿಕನ್​ ಒಕ್ಕೂಟದ 55 ರಾಷ್ಟ್ರಗಳನ್ನೂ ಸದಸ್ಯರನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಜಿ-20 ಸದಸ್ಯ ರಾಷ್ಟ್ರಗಳ ಎಲ್ಲಾ ನಾಯಕರಿಗೆ ಪತ್ರ ಬರೆದಿದ್ದಾರೆ. ನವದೆಹಲಿ ಶೃಂಗಕ್ಕೆ ಮೂರು ತಿಂಗಳಿರುವಾಗ ಮೋದಿ ಮನವಿ ಮಾಡಿದ್ದರು.

ಮನೋಹರ್ ಪರಿಕ್ಕರ್ ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಮತ್ತು ಅನಾಲಿಸಿಸ್‌ನ ಸಲಹೆಗಾರ್ತಿ ರುಚಿತಾ ಬೇರಿ ಈ ಕುರಿತು ಮಾತನಾಡಿ, ಭಾರತದ ಜಿ-20 ಅಧ್ಯಕ್ಷ ಸ್ಥಾನವು ಜಾಗತಿಕ ದಕ್ಷಿಣ ದೇಶಗಳ ಧ್ವನಿಯಾಗಲಿದೆ. ಆಫ್ರಿಕಾವು ಜಾಗತಿಕ ದಕ್ಷಿಣದ ಹೃದಯಭಾಗ. ಹಾಗಾಗಿ ಆಫ್ರಿಕಾವನ್ನು ಬಹುಪಕ್ಷೀಯ ವೇದಿಕೆಯಲ್ಲಿ ಮುಂಚೂಣಿಗೆ ತರಲು ಭಾರತ ಬಯಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇಥಿಯೋಪಿಯಾ ಮತ್ತು ಆಫ್ರಿಕನ್​ ಯೂನಿಯನ್​ನ ಮಾಜಿ ರಾಯಭಾರಿ ಗುರ್ಜಿತ್ ಸಿಂಗ್ ಅವರು, ಭಾರತದ ಜಿ20 ಅಧ್ಯಕ್ಷ ಸ್ಥಾನವು ಭಾರತದ ಆಫ್ರಿಕಾ ನೀತಿಗೆ ಮತ್ತಷ್ಟು ಶಕ್ತಿ ತುಂಬುವ ಸಾಮರ್ಥ್ಯ ಹೊಂದಿದೆ. ಕೋವಿಡ್​-19 ಸಾಂಕ್ರಾಮಿಕ ಮತ್ತು ಉಕ್ರೇನ್ ಸಂಘರ್ಷದ ಪರಿಣಾಮಗಳಿಂದ ಆಫ್ರಿಕಾ ಬಳಲುತ್ತಿದೆ. ಈ ನಿಟ್ಟಿನಲ್ಲಿ ಭಾರತವು ನಿರ್ದಿಷ್ಟವಾಗಿ ಆಫ್ರಿಕಾದ ಪರವಾಗಿ ಮಾತನಾಡುವುದು ಮುಖ್ಯ ಎಂದು ಹೇಳಿದರು.

ಭಾರತವು ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ, ಜನವರಿಯಲ್ಲಿ ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್‌ನ (VoGS) ವರ್ಚುವಲ್ ಶೃಂಗಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಸುಮಾರು 120 ದೇಶಗಳು ಭಾಗಿಯಾಗಿದ್ದವು. ಶೃಂಗಸಭೆ ಉದ್ದೇಶಿಸಿ ಮಾತನಾಡಿದ್ದ ಮೋದಿ, ಜಾಗತಿಕ ದಕ್ಷಿಣ ಭಾಗದ ದೇಶಗಳು ಮುಂದಿನ ದಿನಗಳಲ್ಲಿ ಜಾಗತಿಕ ಅಭಿವೃದ್ಧಿಯಲ್ಲಿ ದೊಡ್ಡ ಪಾಲು ಹೊಂದಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ :ಐತಿಹಾಸಿಕ ಜಿ-20 ಶೃಂಗಸಭೆ: ವಿವಿಧ ರಾಷ್ಟ್ರಗಳ ಮುಖ್ಯಸ್ಥರನ್ನು ಸ್ವಾಗತಿಸಲು ಸಜ್ಜಾದ ನವದೆಹಲಿ

ABOUT THE AUTHOR

...view details