ಹೈದರಾಬಾದ್ :ಮುಂದಿನಕೆಲ ಗಂಟೆಗಳಲ್ಲಿ 2021 ಕಳೆದು ಹೋಗಿ, ಹೊಸ ವರ್ಷ 2022 ಬರಲಿದೆ. ಪ್ರಪಂಚದ ಎಲ್ಲರೂ ಸಡಗರ-ಸಂಭ್ರಮದಿಂದ ಹೊಸ ವರ್ಷ 2022 ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ, ಕೆಲ ದೇಶಗಳು ಈಗಾಗಲೇ ಹೊಸ ವರ್ಷವನ್ನ ವೆಲ್ಕಮ್ ಮಾಡಿಕೊಂಡಿವೆ.
ಸ್ವತಂತ್ರ ದ್ವೀಪವಾಗಿರುವ ಕಿರಿಬಾಟಿ ಈಗಾಗಲೇ ಹೊಸ ವರ್ಷ 2022 ಅನ್ನು ವೆಲ್ಕಮ್ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಸಮೋವಾ, ಟೋಂಗಾ ಕೂಡ ಹೊಸ ವರ್ಷದ ಸಂಭ್ರಮದಲ್ಲಿದೆ.
ಹೊಸ ಭರವಸೆ ಹೊಸ ಬೆಳಕಿನೊಂದಿಗೆ 2022 ಅನ್ನು ಸ್ವಾಗತಿಸಲು ಭಾರತ ಕೂಡ ಸಜ್ಜಾಗಿದೆ. ಈ ಬಗ್ಗೆ ಕೌಂಟ್ಡೌನ್ ಶುರುವಾಗಿದೆ. ಆದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಬಹುತೇಕ ದೇಶಗಳು ಹೊಸ ವರ್ಷ ಬರಮಾಡಿಕೊಂಡಿವೆ. ಕೆಲ ದೇಶಗಳು ಜನವರಿ 1ರಂದು ಹೊಸ ವರ್ಷದ ಆಚರಣೆ ಮಾಡಲಿವೆ.
ಯಾವ ದೇಶ ಪ್ರಥಮ, ಯಾವ ರಾಷ್ಟ್ರದಲ್ಲಿ ಕೊನೆ ಬಾರಿಗೆ ಹೊಸ ವರ್ಷ ಆಚರಣೆ?
ಫೆಸಿಫಿಕ್ ದ್ವೀಪವಾದ ಟೊಂಗಾವು ಹೊಸ ವರ್ಷ ಎಲ್ಲರಿಗಿಂತಲೂ ಮೊದಲು ಆಚರಿಸುತ್ತದೆ. ಡಿಸೆಂಬರ್ 31ರ ಮಧ್ಯಾಹ್ನವೇ ಅದು ಹೊಸ ವರ್ಷ ಬರಮಾಡಿಕೊಳ್ಳುತ್ತದೆ. ಇದರ ಬೆನ್ನಲ್ಲೇ ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಕೂಡ ಮೊದಲು ಹೊಸ ವರ್ಷದ ಸಂಭ್ರಮದಲ್ಲಿರುತ್ತದೆ.
ಇದನ್ನೂ ಓದಿರಿ:ಕೊರೊನಾದಿಂದ ಗುಣಮುಖ.. ಒಮಿಕ್ರಾನ್ ವರದಿಯೂ ನೆಗೆಟಿವ್.. ಆಸ್ಪತ್ರೆಯಿಂದ ಗಂಗೂಲಿ ಡಿಸ್ಚಾರ್ಜ್
ಎಲ್ಲರೂ ಹೊಸ ವರ್ಷ ಸಂಭ್ರಮಿಸಿದ ಬಳಿಕ ಯುನೈಟೆಡ್ ಸ್ಟೇಟ್ಸ್ನ ಹೌಲ್ಯಾಂಡ್ ಮತ್ತು ಜನವಸತಿ ಇಲ್ಲದ ದ್ವೀಪ ರಾಷ್ಟ್ರಗಳು ಭೂಮಿಯ ಮೇಲಿನ ಕೊನೆಯ ಸ್ಥಳವಾಗಿವೆ. ಅಲ್ಲಿ ಜನವರಿ 1ರಂದು ಮಧ್ಯಾಹ್ನ 12 ಗಂಟೆಗೆ ಹೊಸ ವರ್ಷ ಆಚರಣೆ ಮಾಡುತ್ತವೆ.
ಡಿಸೆಂಬರ್ 31ರಂದು ಹೊಸ ವರ್ಷ ಬರಮಾಡಿಕೊಳ್ಳುವ ದೇಶಗಳು
1. ನ್ಯೂಜಿಲ್ಯಾಂಡ್: ಮಧ್ಯಾಹ್ನ 3:30ಕ್ಕೆ
2. ಆಸ್ಟ್ರೇಲಿಯಾ : ಸಂಜೆ 6:30
3. ಜಪಾನ್, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ : ರಾತ್ರಿ 8:30ಕ್ಕೆ
4. ಚೀನಾ, ಫಿಲಿಪೈನ್ಸ್ ಮತ್ತು ಸಿಂಗಾಪುರ : ರಾತ್ರಿ 9:30