ಕರ್ನಾಟಕ

karnataka

ETV Bharat / bharat

ಕೊರೊನಾಗೆ ನಲುಗಿದ ಬಂಗಾಳ.. ಮೇ 16 ರಿಂದ ಲಾಕ್​ಡೌನ್ - ಪಶ್ಚಿಮ ಬಂಗಾಳದಲ್ಲಿ ಲಾಕ್​​ಡೌನ್

ಪಶ್ಚಿಮ ಬಂಗಾಳದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮೇ 16 ರಿಂದ ಮೇ 30 ರವರೆಗೆ ಲಾಕ್​ಡೌನ್ ಘೋಷಿಸಿ ಸರ್ಕಾರ ಆದೇಶಿಸಿದೆ.

ಮೇ 16 ರಿಂದ ಲಾಕ್​ಡೌನ್
ಮೇ 16 ರಿಂದ ಲಾಕ್​ಡೌನ್

By

Published : May 15, 2021, 5:28 PM IST

Updated : May 15, 2021, 5:42 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೋವಿಡ್​ ಆರ್ಭಟ ಜೋರಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಸರ್ಕಾರ ಮೇ 16 ರಿಂದ ಮೇ 30 ರವರೆಗೆ ಲಾಕ್​ಡೌನ್ ಘೋಷಿಸಿ ಆದೇಶಿಸಿದೆ.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಾವು ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಭಾನುವಾರ ಬೆಳಗ್ಗೆ 6 ರಿಂದ ಮೇ 30 ರ ಸಂಜೆ 6 ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಹೇಳಿದರು.

ಈ ಅವಧಿಯಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಶಾಪಿಂಗ್ ಮಾಲ್‌ಗಳು, ಬಾರ್‌ಗಳು, ಪಬ್‌ಗಳು ಮತ್ತು ಬ್ಯೂಟಿ ಪಾರ್ಲರ್‌ಗಳು ಮುಚ್ಚಲ್ಪಡುತ್ತವೆ. ಖಾಸಗಿ ವಾಹನಗಳು, ಟ್ಯಾಕ್ಸಿಗಳು, ಬಸ್‌ಗಳು, ಮೆಟ್ರೋ ರೈಲು, ಉಪನಗರ ರೈಲುಗಳ ಚಲನೆಯನ್ನೂ ಸ್ಥಗಿತಗೊಳಿಸಲಾಗುವುದು.

ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಲ್ಲಿ ಪ್ರತಿಪಕ್ಷಗಳ ಜವಾಬ್ದಾರಿಯುತ ನಡೆ.. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಕೇಂದ್ರ!!

ಪೆಟ್ರೋಲ್ ಬಂಕ್​ಗಳು ಓಪನ್ ಆಗಿರುತ್ತವೆ ಮತ್ತು ಅಗತ್ಯ ಸೇವೆಗಳಾದ ಹಾಲು, ನೀರು, ಔಷಧ, ವಿದ್ಯುತ್, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಮಾಧ್ಯಮಗಳು ಲಾಕ್​ಡೌನ್ ವ್ಯಾಪ್ತಿಗೆ ಬರುವುದಿಲ್ಲ, ಇ-ಕಾಮರ್ಸ್ ಮತ್ತು ಹೋಂ ಡೆಲಿವರಿಗಳಿಗೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

Last Updated : May 15, 2021, 5:42 PM IST

ABOUT THE AUTHOR

...view details