ಮೇಷ: ಈ ವಾರವು ನಿಮಗೆ ಅನುಕೂಲಕರ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಕಾಡುತ್ತಿರುವ ಸಮಸ್ಯೆಗಳನ್ನು ದೂರಗೊಳಿಸಲು ನಿಮ್ಮ ಅತ್ತೆ ಮಾವಂದಿರೊಂದಿಗೆ ಮಾತನಾಡುವುದು ಅಗತ್ಯ. ಆದರೆ ಇದರ ಫಲಿತಾಂಶ ಪಡೆಯಲು ಸಮಯ ಬೇಕಾದೀತು. ಪ್ರೇಮ ಜೀವನ ಸಾಗಿಸುತ್ತಿರುವ ಜನರ ಮನದಲ್ಲಿ ಪ್ರೇಮ ನೆಲೆಸಲಿದೆ. ಆದರೆ ಇದೆಲ್ಲವನ್ನು ಅವರ ಪ್ರೇಮಿಗೆ ವ್ಯಕ್ತಪಡಿಸುವಲ್ಲಿ ಅವರು ಸಮಸ್ಯೆ ಎದುರಿಸಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೊರಬಂದು ಎಲ್ಲವನ್ನೂ ಅವರಿಗೆ ಸ್ಪಷ್ಟವಾಗಿ ಹೇಳಿ ಬಿಡಿ. ಆಗ ಮಾತ್ರವೇ ನಿಮ್ಮ ಪ್ರೇಮದ ಬಂಡಿಯು ಮುಂದೆ ಸಾಗಲಿದೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ಸಹೋದರರು ಮತ್ತು ಸಹೋದರಿಯರ ಪ್ರೇಮವನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ಶೀಘ್ರ ಪ್ರಗತಿ ದೊರೆಯಲಿದೆ. ಬಾಕಿ ಉಳಿದಿರುವ ಕೆಲಸದಿಂದ ನೀವು ದೂರ ಹೋಗಲಿದ್ದೀರಿ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ. ನಿಮ್ಮ ಕೆಲಸವನ್ನು ಜನರು ಗುರುತಿಸಲಿದ್ದಾರೆ. ಇದರಿಂದ ನಿಮಗೆ ಪ್ರಯೋಜನ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಬಹುದು.
ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈಯಕ್ತಿಕ ಬದುಕಿನಲ್ಲಿ ನೀವು ಸಂತಸ ಅನುಭವಿಸಲಿದ್ದೀರಿ. ಏಕೆಂದರೆ ಸಮಯವು ನಿಮ್ಮ ಪರವಾಗಿದೆ. ನೀವು ಪ್ರೇಮ ಸಂಬಂಧದಲ್ಲಿದ್ದರೂ ಅಥವಾ ವೈವಾಹಿಕ ಸಂಬಂಧದಲ್ಲಿದ್ದರೂ ನಿಮ್ಮ ಬದುಕನ್ನು ನೀವು ಆನಂದಿಸಲಿದ್ದೀರಿ. ಜೀವನ ಸಂಗಾತಿ ಅಥವಾ ಪ್ರೇಮಿಯ ಜೊತೆಗಿನ ಆಪ್ತತೆಯಲ್ಲಿ ವೃದ್ಧಿ ಉಂಟಾಗಲಿದೆ. ನೀವು ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಇದು ಭವಿಷ್ಯದಲ್ಲಿ ನಿಮ್ಮ ಪ್ರಯೋಜನಕ್ಕೆ ಬರಲಿದೆ. ಆದರೆ ನಿಮ್ಮಲ್ಲಿ ಅಹಂ ಕಾಣಿಸಿಕೊಳ್ಳಲಿದ್ದು ಇದು ನಿಮ್ಮ ಗೆಳೆಯರ ಜೊತೆಗಿನ ಸಂಬಂಧವನ್ನು ಹಾಳು ಮಾಡಬಹುದು. ಹೀಗಾಗಿ ಇದರಿಂದ ದೂರವಿರಲು ಯತ್ನಿಸಿ. ಕೆಲವೊಂದು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಇದರಿಂದಾಗಿ ಮನೆಯ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಆದಾಯದ ಕುರಿತು ಮಾಡಿದ ಪ್ರಯತ್ನಗಳಿಗೆ ತಕ್ಕುದಾದ ಫಲ ದೊರೆಯಲಿದೆ. ಆದರೆ ನಿಮ್ಮ ನಿರೀಕ್ಷೆಗೂ ಮಿಕ್ಕಿ, ಆದಾಯಕ್ಕೆ ಪ್ರತಿಯಾಗಿ ಖರ್ಚಿನಲ್ಲೂ ಹೆಚ್ಚಳ ಉಂಟಾಗಬಹುದು. ಈ ಕುರಿತು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕಠಿಣ ಶ್ರಮವನ್ನು ಮುಂದುವರಿಸಲಿದ್ದಾರೆ ಹಾಗೂ ತಮ್ಮ ಕಠಿಣ ಶ್ರಮದ ಪ್ರಯೋಜನವನ್ನು ಪಡೆಯಲಿದ್ದಾರೆ. ಆದರೆ ಸಹೋದ್ಯೋಗಿಗಳ ಬೆಂಬಲ ಪಡೆಯುವುದು ಕಷ್ಟಕರ.
ಮಿಥುನ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನಿಮ್ಮ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಆದರೂ ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಪ್ರೇಮ ನೆಲೆಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ವಾರವೆನಿಸಲಿದೆ. ಸದ್ಯಕ್ಕೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಅಲ್ಲದೆ ಭವಿಷ್ಯದ ಕುರಿತು ಧನಾತ್ಮಕವಾಗಿ ಯೋಚಿಸಿ. ಅನಗತ್ಯವಾಗಿ ವಾದ ಮಾಡುವುದರಿಂದ ಯಾವುದೇ ಪ್ರಯೋಜನ ದೊರೆಯದು. ಉದ್ಯೋಗದಲ್ಲಿರುವವರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಹಿರಿಯರ ಜೊತೆಗೆ ಉತ್ತಮ ಸಂಬಂಧವನ್ನು ರೂಪಿಸಲು ನೀವು ಯತ್ನಿಸಬೇಕು. ಯಾವುದೇ ವಿಷಯದ ಕುರಿತು ಅವರ ಜೊತೆಗೆ ವಾಗ್ವಾದ ಮಾಡಬೇಡಿ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರ ಏಕಾಗ್ರತೆಯು ದುರ್ಬಲಗೊಳ್ಳಲಿದೆ. ಇದು ಅಧ್ಯಯನದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು.
ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಮಾತುಗಳನ್ನು ಎಚ್ಚರಿಕೆಯಿಂದ ಆಡಬೇಕು. ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಮೊದಲು ನಿಮ್ಮ ಎದುರಿನ ವ್ಯಕ್ತಿಯ ಮನೋಸ್ಥಿತಿ ಹೇಗಿದೆ ಎಂಬುದನ್ನು ಅನೇಕ ಬಾರಿ ಯೋಚಿಸಿ. ನೀವು ವ್ಯಕ್ತಪಡಿಸುವ ಮಾತುಗಳನ್ನು ಅವರು ತಪ್ಪಾಗಿ ಅರ್ಥೈಸಬಹುದು. ಹೀಗಾಗಿ ತಾಳ್ಮೆಯಿಂದ ವರ್ತಿಸಿ. ವಾರದ ಆರಂಭದಿಂದಲೇ ನಿಮ್ಮ ಆತ್ಮವಿಶ್ವಾಸವು ಚೆನ್ನಾಗಿರಲಿದೆ. ಆತ್ಮವಿಶ್ವಾಸದ ಆಧಾರದಲ್ಲಿ ಅನೇಕ ಕಷ್ಟಕರ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಬಗೆಹರಿಸಲು ನಿಮಗೆ ಸಾಧ್ಯವಾಗಲಿದೆ. ಕೆಲಸದಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಕೆಲಸದಲ್ಲಿ ನೀವು ಪ್ರಗತಿ ಸಾಧಿಸಲಿದ್ದು ನಿಮ್ಮ ಬಾಸ್ ಬೆಂಬಲವನ್ನು ಪಡೆಯಲಿದ್ದೀರಿ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಹಣಕಾಸಿನ ಮೇಲೆ ಒತ್ತಡ ಉಂಟಾಗಬಹುದು. ನೀವು ಸರ್ಕಾರಿ ಕ್ಷೇತ್ರದಿಂದ ಒಳ್ಳೆಯ ಲಾಭವನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಸಮಯವು ಸ್ವಲ್ಪ ದುರ್ಬಲವಾಗಿದೆ. ಏಕೆಂದರೆ ನಿಮ್ಮ ಕೆಲಸವನ್ನು ಮುಂದುವರಿಯಲು ನೀವು ಮಾನಸಿಕವಾಗಿ ಸಿದ್ಧರಾಗಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ತಾಳ್ಮೆಯಿಂದ ವರ್ತಿಸಬೇಕು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ಇದೇ ವೇಳೆ ನಿಮ್ಮ ಮನಸ್ಸಿನಲ್ಲಿರುವುದೆಲ್ಲವನ್ನು ನಿಮ್ಮ ಪ್ರೇಮಿಗೆ ತಿಳಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಪ್ರಯಾಣದಿಂದ ಲಾಭ ಗಳಿಸಲಿದ್ದಾರೆ. ಏನಾದರೂ ಹೊಸತನ್ನು ಮಾಡಲು ಯತ್ನಿಸಿ. ದೂರದ ಪ್ರದೇಶಗಳಿಗೆ ಪ್ರಯಾಣಕ್ಕೆ ಹೋಗುವ ಅನಿವಾರ್ಯತೆ ಉಂಟಾದೀತು. ಕೆಲವೊಂದು ಹೊಸ ಜನರನ್ನು ಭೇಟಿ ಮಾಡುವುದರಿಂದ ಹೊಸತನ ದೊರೆಯಲಿದೆ. ಗೆಳೆಯರು ಸಹ ಬೆಂಬಲ ನೀಡಲಿದ್ದಾರೆ. ನಿಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದೀರಿ. ಸರ್ಕಾರದಿಂದ ದೊಡ್ಡ ಮಟ್ಟದ ಪ್ರಯೋಜನ ದೊರೆಯಬಹುದು. ನೀವು ಸರ್ಕಾರಿ ಉದ್ಯೋಗಿ ಆಗಿದ್ದರೆ ನಿಮಗೆ ಅದ್ಭುತ ಲಾಭ ದೊರೆಯಲಿದೆ. ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಗಮನ ನೀಡಬೇಕು. ನೀವು ವೇಳಾಪಟ್ಟಿಯನ್ನು ರಚಿಸಿ ಅದರಂತೆಯೇ ಮುಂದುವರಿಯಬೇಕು. ಆಗ ಮಾತ್ರವೇ ಯಶಸ್ಸು ಲಭಿಸಲಿದೆ.
ಕನ್ಯಾ: ಈ ವಾರ ನಿಮಗೆ ನಿರಾಳತೆ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಯಾವುದಾದರೂ ಕಾರಣಕ್ಕೆ ಒಂದಷ್ಟು ಸಮಸ್ಯೆ ಉಂಟಾಗಬಹುದು. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಮುಂದುವರಿಯಿರಿ. ಅವರಿಗೆ ಸುಂದರ ಉಡುಗೊರೆಯನ್ನು ಖರೀದಿಸಿ. ನೀವು ಕೆಲಸ ಮಾಡುವಲ್ಲಿ ಪರಿಸ್ಥಿತಿಯು ನಿಮ್ಮ ಪರವಾಗಿ ಇರಲಿದೆ. ನಿಮ್ಮ ಕೆಲಸವನ್ನು ಶಕ್ತಿಯಿಂದ ನೆರವೇರಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಯಾವುದೇ ತಪ್ಪು ಗ್ರಹಿಕೆಗಳು ಇದ್ದರೂ ಅವು ದೂರಗೊಳ್ಳಲಿದ್ದು, ಕೆಲಸದಲ್ಲಿ ಮೋಜು ಅನುಭವಿಸಲಿದ್ದೀರಿ. ನಿಮ್ಮ ತಂಡದ ಸದಸ್ಯರು ನಿಮಗೆ ಉತ್ತಮ ಬೆಂಬಲ ಒದಗಿಸಲಿದ್ದಾರೆ. ಇದರಿಂದಾಗಿ ಬಡ್ತಿ ದೊರೆಯಲು ಸುಲಭ ಅವಕಾಶ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಅನುಕೂಲಕರವಾಗಿದೆ. ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಫಲ ದೊರೆಯಲಿದೆ.