ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶವನ್ನ 'ಮದ್ಯ ಮುಕ್ತ ರಾಜ್ಯ'ವನ್ನಾಗಿಸುವೆ: ಸಿಎಂ ಶಿವರಾಜ್​​ ಸಿಂಗ್​ ಚೌಹಾಣ್​ - Madhya Pradesh Chief Minister Shivraj Singh Chouhan

ಮದ್ಯ ಸೇವಿಸುವ ಜನರಿರುವವರೆಗೂ ಅದರ ಪೂರೈಕೆ ಕೂಡ ಆಗುತ್ತಲೇ ಇರುತ್ತದೆ. ಮದ್ಯ ಮುಕ್ತ ಅಭಿಯಾನದ ಮೂಲಕ ಜನರ ಮನಪರಿವರ್ತನೆ ಮಾಡಬೇಕಿದೆ ಎಂದು ಶಿವರಾಜ್​​ ಸಿಂಗ್​ ಚೌಹಾಣ್​ ಹೇಳಿದರು.

CM Shivraj
ಸಿಎಂ ಶಿವರಾಜ್​​ ಸಿಂಗ್​ ಚೌಹಾಣ್​

By

Published : Feb 7, 2021, 10:39 AM IST

ಕತ್ನಿ (ಮಧ್ಯಪ್ರದೇಶ): ಮಧ್ಯಪ್ರದೇಶವನ್ನು 'ಮದ್ಯ ಮುಕ್ತ ರಾಜ್ಯ'ವನ್ನಾಗಿಸುವ ಗುರಿ ನಮ್ಮ ಸರ್ಕಾರಕ್ಕಿದೆ ಎಂದು ಮುಖ್ಯಮಂತ್ರಿ ಶಿವರಾಜ್​​ ಸಿಂಗ್​ ಚೌಹಾಣ್​ ಹೇಳಿದ್ದಾರೆ.

ಆದರೆ ಇದು ಮದ್ಯ ನಿಷೇಧದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಮದ್ಯ ಸೇವಿಸುವ ಜನರಿರುವವರೆಗೂ ಅದರ ಪೂರೈಕೆ ಕೂಡ ಆಗುತ್ತಲೇ ಇರುತ್ತದೆ. ನಾವು ಮದ್ಯ ಮುಕ್ತ ಅಭಿಯಾನವನ್ನು ನಡೆಸುತ್ತೇವೆ. ಇದರಿಂದ ಜನರ ಮನಪರಿವರ್ತನೆಗೊಂಡು ಕುಡಿಯುವುದನ್ನು ನಿಲ್ಲಿಸುತ್ತಾರೆ. ಇದಕ್ಕಾಗಿ ನಾವು ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಕತ್ನಿ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಶಿವರಾಜ್​​ ಸಿಂಗ್ ಹೇಳಿದರು.

ಇದನ್ನೂ ಓದಿ:ನಮೋ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಜ್ಜಾದ ಹಲ್ಡಿಯಾ

ಮುಂದಿನ ಮೂರು ವರ್ಷಗಳೊಳಗಾಗಿ ಕತ್ನಿ ಜಿಲ್ಲೆಯ ಜನರು ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರನ್ನ ಪಡೆಯಲಿದ್ದಾರೆ. ಬಡವರಿಗೆ ಮನೆಗಳನ್ನು ನಿರ್ಮಿಸಲು ಆರ್ಥಿಕ ನೆರವು ನೀಡಲಾಗುವುದು. 3,25,000 ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಿ, ಅಗತ್ಯವಿರುವವರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಕೊಡಿಸಲಾಗುವುದು. ಹೆಣ್ಣುಮಕ್ಕಳೊಂದಿಗಿನ ದುಷ್ಕೃತ್ಯಕ್ಕೆ ಆರೋಪಿಗಳಿಗೆ ಮರಣದಂಡನೆ ಘೋಷಿಸಿದ ಮೊದಲ ಸರ್ಕಾರ ಮಧ್ಯಪ್ರದೇಶವಾಗಿದೆ. ಕಟ್ನಿಯಲ್ಲಿ ಮುಸ್ಕಾನ್ ಅಭಿಯಾನ ಅಡಿಯಲ್ಲಿ 50 ಹೆಣ್ಣುಮಕ್ಕಳನ್ನು ರಕ್ಷಿಸಲಾಗಿದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು.

ABOUT THE AUTHOR

...view details