ಕರ್ನಾಟಕ

karnataka

ETV Bharat / bharat

ಮಗಳಿದ್ದ ವಿಮಾನಕ್ಕೆ ಅಪ್ಪನೇ ಪೈಲಟ್‌; ಪುಟ್ಟ ಬಾಲಕಿ ಫುಲ್ ಖುಷ್‌ - ಶನಾಯ ಮೋತಿಹಾರ್‌

ತಾನು ಪ್ರಮಾಣಿಸುತ್ತಿದ್ದ ವಿಮಾನಕ್ಕೆ ತಂದೆಯೇ ಪೈಲಟ್‌ ಎಂಬುದನ್ನು ಕಣ್ಣಾರೆ ಕಂಡ ಪುಟ್ಟ ಬಾಲಕಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಖತ್‌ ವೈರಲ್‌ ಆಗ್ತಿದೆ.

Watch: A Girl's Excited Reaction After Seeing Pilot Dad On The Same Flight
ಮಗಳಿದ್ದ ವಿಮಾನಕ್ಕೆ ಅಪ್ಪನೇ ಪೈಲಟ್‌; ಪುಟ್ಟ ಬಾಲಕಿ ಫುಲ್ ಖುಷ್‌

By

Published : Oct 13, 2021, 6:05 PM IST

ನವದೆಹಲಿ: ಹೋಟೆಲ್‌ ಕೆಲಸ ಮಾಡುವ ತಂದೆ ತನ್ನ ಮಕ್ಕಳಿಗೆ ಅದೇ ಹೋಟೆಲ್‌ನಲ್ಲಿ ಸಪ್ಲೇಯರ್‌ ಆಗಿ ಊಟ ಬಡಿಸಿ ಸರ್​ಪ್ರೈಸ್​ ನೀಡಿದ್ದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ತಂದೆ ವಿಮಾನದಲ್ಲಿ ತನ್ನ ಮುದ್ದಿನ ಪುತ್ರಿಗೆ ಆಶ್ಚರ್ಯಕರ ಸಹಿ ಸುದ್ದಿ ನೀಡಿದ್ದಾರೆ. ತಾನು ಪ್ರಮಾಣಿಸುತ್ತಿದ್ದ ವಿಮಾನಕ್ಕೆ ತಂದೆಯೇ ಪೈಲಟ್‌ ಎಂಬುದನ್ನು ಕಣ್ಣಾರೆ ಕಂಡ ಪುಟ್ಟ ಕಂದಮ್ಮನ ಖುಷಿಗೆ ಪಾರವೇ ಇಲ್ಲದಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗ್ತಿದೆ.

ಇತ್ತೀಚೆಗೆ ತಾಯಿಯೊಂದಿಗೆ ದೆಹಲಿಗೆ ಹೋಗಲು ಗೋಏರ್ ವಿಮಾನ ಹತ್ತಿ ಸೀಟಲ್ಲಿ ಕುಳಿತಿದ್ದ ಪುಟ್ಟ ಬಾಲಕಿಗೆ ಕಾಕ್‌ಪಿಟ್‌ನ ಬಾಗಿಲಿನಲ್ಲಿ ನಿಂತಿದ್ದ ತನ್ನ ತಂದೆಯನ್ನು ಕಂಡು ಪಪ್ಪಾ ಎಂದು ನಗುತ್ತಲೇ ಕೂಗಿ ಶುಭಾಶಯ ಕೋರಿದ್ದಾಳೆ. ಇದಕ್ಕೆ ಆಕೆಯ ತಂದೆ ಮುಗುಳ್ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ವಿಮಾನದಲ್ಲಿ ಪೈಲಟ್‌ ತಂದೆ ಹಾಗೂ ಪುತ್ರಿ ಶನಯಾ ಮೋತಿಹಾರ್ ನಡುವಿನ ಸಂವಾದವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.

ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಶನಾಯ ಮೋತಿಹಾರ್‌, ಅಪ್ಪನ ಜೊತೆ ನನ್ನ ಮೊದಲ ವಿಮಾನಯಾನ. ಅವರು ನನ್ನನ್ನು ದೆಹಲಿಗೆ ಹಾರಿಸಿದರು. ನಾನು ಅವರನ್ನು ನೋಡಲು ತುಂಬಾ ಉತ್ಸುಕಳಾಗಿದ್ದೆ. ಇದು ನನ್ನ ಅತ್ಯುತ್ತಮ ವಿಮಾನ. ಲವ್ ಯು, ಪಪ್ಪಾ ಎಂದು ಬರೆದುಕೊಂಡಿದ್ದಾರೆ.

For All Latest Updates

ABOUT THE AUTHOR

...view details