ಕರ್ನಾಟಕ

karnataka

ETV Bharat / bharat

ದೇಶದ ಸಾರ್ವಭೌಮತ್ವ ಪ್ರಶ್ನಿಸುವರಿಗೆ ಅವರ ಭಾಷೆಯಲ್ಲೇ ಉತ್ತರಿಸಬೇಕಾಗುತ್ತೆ: ಅಮಿತ್ ಶಾ Warning - ಗಡಿ ಭದ್ರತಾ ಪಡೆ

ವಿಶ್ವ ಭೂಪಟದಲ್ಲಿ ಭಾರತ ತನ್ನ ಸ್ಥಾನವನ್ನ ಇನ್ನಷ್ಟು ಬಲಗೊಳಿಸುತ್ತಿದೆ. ದೇಶಕ್ಕಾಗಿ ಅವರ ಬಲಿದಾನ ಯಾವಾಗಲೂ ನೆನಪಿನಲ್ಲಿರುತ್ತದೆ. ಗಡಿಯಲ್ಲಿನ ನಮ್ಮ ರಕ್ಷಿಸುತ್ತಿರುವ ಬಿಎಸ್​ಎಫ್ ಹಾಗೂ ಅರೆ ಸೈನಿಕ ಪಡೆಗಳಿಂದಾಗಿ ವಿಶ್ವ ಭೂಪಟದಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನವಿದೆ ಎಂದಿದ್ದಾರೆ.

amit-shah
ಅಮಿತ್ ಶಾ

By

Published : Jul 17, 2021, 3:27 PM IST

ನವದೆಹಲಿ: ಗಡಿ ರೇಖೆಯಲ್ಲಿ ಭಾರತವನ್ನು ಕೆಣಕುತ್ತಿರುವ ರಾಷ್ಟ್ರಗಳಿಗೆ ಗೃಹ ಸಚಿವ ಅಮಿತ್ ಶಾ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದ್ದಾರೆ. ಭಾರತದ ಸಾರ್ವಭೌಮತ್ವ ಪ್ರಶ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ರುಸ್ತಮ್ಜಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 18ನೇ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಎದುರು ಹಲವು ಸವಾಲುಗಳಿವೆ, ಗಡಿ ಭದ್ರತೆ ಎಂದರೆ ದೇಶದ ಭದ್ರತೆ, ನನಗೆ ಭಾರತೀಯ ಸೇನೆಯ ಕುರಿತು ಸಂಪೂರ್ಣ ನಂಬಿಕೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಡಿ ನಾವು ಸ್ವತಂತ್ರ ರಕ್ಷಣಾ ನೀತಿಯನ್ನು ಹೊಂದಿದ್ದೇವೆ, ಇದರಲ್ಲಿ ನಮ್ಮ ಸಾರ್ವಭೌಮತ್ವ ಪ್ರಶ್ನಿಸುವವರಿಗೆ ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ಸಿಗುತ್ತದೆ ಎಂದಿದ್ದಾರೆ.

ವಿಶ್ವ ಭೂಪಟದಲ್ಲಿ ಭಾರತ ತನ್ನ ಸ್ಥಾನವನ್ನ ಇನ್ನಷ್ಟು ಬಲಗೊಳಿಸುತ್ತಿದೆ. ದೇಶಕ್ಕಾಗಿ ಅವರ ಬಲಿದಾನ ಯಾವಾಗಲೂ ನೆನಪಿನಲ್ಲಿರುತ್ತದೆ. ಗಡಿಯಲ್ಲಿ ನಮ್ಮ ರಕ್ಷಿಸುತ್ತಿರುವ ಬಿಎಸ್​ಎಫ್ ಹಾಗೂ ಅರೆ ಸೈನಿಕ ಪಡೆಗಳಿಂದಾಗಿ ವಿಶ್ವ ಭೂಪಟದಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನವಿದೆ ಎಂದಿದ್ದಾರೆ.

ಈ ವೇಳೆ ರುಸ್ತಮ್ಜಿ ಸೇವೆ ನೆನೆದ ಅಮಿತ್ ಶಾ, ಹಿಂದಿನ ಪಾಕಿಸ್ತಾನದಲ್ಲಿ, ಮಾನವ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ಬಳಿಕ ಬಾಂಗ್ಲಾದೇಶ ಸ್ವತಂತ್ರವಾಯಿತು. ಈ ವೇಳೆ ಯುದ್ಧದಲ್ಲಿ ನಮ್ಮ ಸೇನೆ ನಿರ್ಣಾಯಕ ಪಾತ್ರ ವಹಿಸಿತ್ತು. ಜೊತೆಗೆ ರುಸ್ತಮ್ಜಿ ಕಾರ್ಯಾಚರಣೆ ಮುನ್ನಡೆಸಿದ್ದರು ಎಂದಿದ್ದಾರೆ.

ಇದನ್ನೂ ಓದಿ:ಸಂಚಲನ; ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್‌ ಪವಾರ್‌: ರಾಜಕೀಯ ಚರ್ಚಿಸಿಲ್ಲ ಎಂದ ಎನ್‌ಸಿಪಿ ನಾಯಕ

ABOUT THE AUTHOR

...view details