ಕರ್ನಾಟಕ

karnataka

ETV Bharat / bharat

ಅಂಗನವಾಡಿ ಕಾರ್ಯಕರ್ತೆಯ ಮನೆಯಲ್ಲಿ₹4 ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿ - 4 ಕೋಟಿಗೂ ಹೆಚ್ಚು ಮೌಲ್ಯದ ಚರಾಸ್ತಿ

ಇಲ್ಲೊಬ್ಬರು ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆ ಬರೋಬ್ಬರಿ 4 ಕೋಟಿ ರೂ.ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಈ ಮಹಿಳೆಯ ಶ್ರೀಮಂತಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ದಾಳಿ ನಡೆಸಿದ್ದರು.

Vigilance unearths assets worth over Rs 4cr during search at Anganwadi worker's houses
ಅಂಗನವಾಡಿ ಕಾರ್ಯಕರ್ತೆ ಮನೆಯಲ್ಲಿ ಶೋಧ

By

Published : Sep 14, 2021, 9:52 PM IST

ಭುವನೇಶ್ವರ: ಒಡಿಶಾದ ಅಂಗನವಾಡಿ ಕಾರ್ಯಕರ್ತೆ ಮನೆಗಳಲ್ಲಿ ನಡೆಸಲಾದ ಶೋಧ ಕಾರ್ಯದ ವೇಳೆ (Vigilance Directorate) ಜಾಗರೂಕ ನಿರ್ದೇಶನಾಲಯ 4 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ ಮಾಡಿದೆ.

ಭುವನೇಶ್ವರದ ಕೊರಡಕಾಂತ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಬಿತಾ ಮಥನ್ ತನ್ನ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ ಎಂದು ನಿರ್ದೇಶನಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

4 ಕೋಟಿಗೂ ಹೆಚ್ಚು ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಮನೆ ಶೋಧದ ವೇಳೆ ಪತ್ತೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಭುವನೇಶ್ವರದಲ್ಲಿ 10 ಪ್ಲಾಟ್​ಗಳು ಸೇರಿದಂತೆ ಒಟ್ಟು 14 ಪ್ಲಾಟ್‌ಗಳಳು 7 ಕಟ್ಟಡಗಳು, ಒಂದು ವಾಹನ ಮತ್ತು 6.36 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಅಂಗನವಾಡಿ ಕಾರ್ಯಕರ್ತೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಖೋರ್ಧಾ, ಕೇಂದ್ರಪಾರ, ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳ ಆರು ಸ್ಥಳಗಳಲ್ಲಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿದ್ದು, ಇದರಲ್ಲಿ 10 ಪೊಲೀಸ್ ಉಪಾಧೀಕ್ಷಕರು, ಐವರು ಇನ್​ಸ್ಪೆಕ್ಟರ್​ಗಳು ಮತ್ತು ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details