ಕರ್ನಾಟಕ

karnataka

ETV Bharat / bharat

8 ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕತಾರ್ ಕೋರ್ಟ್‌: ಆಘಾತ ವ್ಯಕ್ತಪಡಿಸಿದ ವಿದೇಶಾಂಗ ಸಚಿವಾಲಯ

ಕತಾರ್​ ಕೋರ್ಟ್‌ ಎಂಟು ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದವರ ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಭಾರತ ವಿದೇಶಾಂಗ ಸಚಿವಾಲಯ ತಿಳಿಸಿದೆ.

Etv Bharat
Etv Bharat

By ETV Bharat Karnataka Team

Published : Oct 26, 2023, 4:50 PM IST

Updated : Oct 26, 2023, 8:03 PM IST

ನವದೆಹಲಿ:ಕತಾರ್​ನಲ್ಲಿ ಎಂಟು ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿದೆ. ಈ ಕುರಿತು ವಿದೇಶಾಂಗ ಸಚಿವಾಲಯವು ಆಘಾತ ವ್ಯಕ್ತಪಡಿಸಿದ್ದು, ಎಲ್ಲ ರೀತಿಯ ಕಾನೂನು ನೆರವು ಕಲ್ಪಿಸುವುದಾಗಿ ಹೇಳಿದೆ.

ಅಲ್​ ದಹ್ರಾ ಕಂಪನಿಯ ಈ 8 ಮಂದಿ ಭಾರತೀಯ ಉದ್ಯೋಗಿಗಳು ಭಾಗಿಯಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಕತಾರ್‌ನ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ ಎಂಬ ಪ್ರಾಥಮಿಕ ಮಾಹಿತಿ ನಮಗೆ ಲಭ್ಯವಾಗಿದೆ. ಮರಣದಂಡನೆ ತೀರ್ಪು ನಮಗೆ ಆಘಾತ ಉಂಟುಮಾಡಿದೆ. ತೀರ್ಪಿನ ವಿವರಕ್ಕೆ ಕಾಯುತ್ತಿದ್ದೇವೆ. ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲ ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದುವರೆದು, ಈ ಪ್ರಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ನಿಕಟವಾಗಿ ಪರಿಶೀಲಿಸುತ್ತಿದ್ದೇವೆ. ಎಲ್ಲ ಕಾನ್ಸುಲರ್ ಮತ್ತು ಕಾನೂನು ನೆರವು ಒದಗಿಸುವುದನ್ನು ಮುಂದುವರಿಸುತ್ತೇವೆ. ಕತಾರ್​ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಪ್ರಕರಣವು ಗೌಪ್ಯ ಸ್ವರೂಪದ ಕಾರಣ, ಈ ಹಂತದಲ್ಲಿ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ:ಕತಾರ್​ ಜೈಲಿನಲ್ಲಿದ್ದಾರೆ ಎಂಟು ಜನ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿ: ಭವಿಷ್ಯದ ಬಗ್ಗೆ ಆತಂಕ

Last Updated : Oct 26, 2023, 8:03 PM IST

ABOUT THE AUTHOR

...view details