ಶ್ರೀಕಾಕುಳಂ(ಆಂಧ್ರಪ್ರದೇಶ) :ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ವಜ್ರಪುಕೊತ್ತೂರು ಮಂಡಲದ ನುವ್ವಲರೇವು ಎಂಬಲ್ಲಿ ವಿವಾಹ ಸಂಪ್ರದಾಯಗಳೇ ವಿಚಿತ್ರವಾಗಿವೆ. ಈ ಊರಿನ ಯಾವೊಬ್ಬ ಹೆಣ್ಣುಮಗಳು ಊರ ಆಚೆಯ ಗಂಡಸನ್ನು ಮದುವೆಯಾಗುವುದಿಲ್ಲವಂತೆ. ಇನ್ನೂ ವಿಶೇಷ ಅಂದ್ರೆ ವಧು ಕೂಡ ವರನಂತೆ ತಾಳಿ ಕಟ್ಟುತ್ತಾಳೆ.
ಶ್ರೀಕಾಕುಳಂ ಜಿಲ್ಲೆಯ ನುವ್ವಲರೇವು ಗ್ರಾಮ ವಿವಾಹ ಸಂಪ್ರದಾಯಗಳ ಆಚರಣೆಗಳಿಂದಾಗಿಯೇ ಜನಜನಿತ. ಗ್ರಾಮದಲ್ಲಿ ನಿನ್ನೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 45 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಲ್ಲಿ ಮದುವೆಗಳು ಯಾವಾಗಲೂ ಗ್ರಾಮದೊಳಗಿನ ಪುರುಷರು ಮತ್ತು ಮಹಿಳೆಯರ ನಡುವೆಯಷ್ಟೇ ನಡೆಯುತ್ತವೆ.
ಈ ನಿಯಮವನ್ನು ಶತಮಾನಗಳಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಈ ಹಳ್ಳಿಯ ಹೆಣ್ಣುಮಕ್ಕಳನ್ನು ಬೇರೆ ಹಳ್ಳಿಗಳ ಗಂಡಸೊಂದಿಗೆ ಮದುವೆ ಮಾಡಿ ಕೊಡುವುದಿಲ್ಲ. ಗ್ರಾಮಸ್ಥರೇ 2 ವರ್ಷಗಳಿಗೊಮ್ಮೆ ಸಾಮೂಹಿಕ ವಿವಾಹಗಳಿಗೆ ಶುಭ ದಿನಾಂಕವನ್ನು ನಿಗದಿಪಡಿಸುತ್ತಾರೆ.