ಕರ್ನಾಟಕ

karnataka

ETV Bharat / bharat

ಎಂಬಿಬಿಎಸ್ ಪದವೀಧರರಿಗೆ 10 ವರ್ಷಗಳ ಸರ್ಕಾರಿ ಸೇವೆ ಕಡ್ಡಾಯಗೊಳಿಸಿದ ಯುಪಿ ಸರ್ಕಾರ - ವೈದ್ಯರಿಗೆ ಸರ್ಕಾರಿ ಸೇವೆ ಕಡ್ಡಾಯ

ವಿದ್ಯಾಭ್ಯಾಸ ಮುಗಿದ ನಂತರ ಸರ್ಕಾರಿ ಆಸ್ಪತ್ರೆಯಿಂದ ಹೊರ ಹೋಗಲು ಬಯಸುವ ವೈದ್ಯರು ರಾಜ್ಯ ಸರ್ಕಾರಕ್ಕೆ ಒಂದು ಕೋಟಿ ದಂಡ ಪಾವತಿಸಬೇಕಾಗುತ್ತದೆ..

doctor
doctor

By

Published : Dec 12, 2020, 12:21 PM IST

ಲಖನೌ (ಉತ್ತರಪ್ರದೇಶ) :ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ವೈದ್ಯರು ವೈದ್ಯಕೀಯ ಕಾಲೇಜಿನಿಂದ ಸ್ನಾತಕೋತ್ತರ ಪದವಿ (ಪಿಜಿ) ಮುಗಿಸಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಹತ್ತು ವರ್ಷ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವಂತೆ ಉತ್ತರಪ್ರದೇಶದ ಸಾರ್ವಜನಿಕ ಆರೋಗ್ಯ ಪ್ರಧಾನ ಕಾರ್ಯದರ್ಶಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್ಚಿನ ಆರೋಗ್ಯ ವೃತ್ತಿಪರರು ತಮ್ಮ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ನಂತರ ಹೆಚ್ಚು ಲಾಭದಾಯಕ ಖಾಸಗಿ ಆಸ್ಪತ್ರೆಗಳಿಗೆ ತೆರಳುವುದರಿಂದ ಅನುಭವಿ ವೈದ್ಯರು ಇಲ್ಲದ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.

ವಿದ್ಯಾಭ್ಯಾಸ ಮುಗಿದ ನಂತರ ಸರ್ಕಾರಿ ಆಸ್ಪತ್ರೆಯಿಂದ ಹೊರ ಹೋಗಲು ಬಯಸುವ ವೈದ್ಯರು ರಾಜ್ಯ ಸರ್ಕಾರಕ್ಕೆ ಒಂದು ಕೋಟಿ ದಂಡ ಪಾವತಿಸಬೇಕಾಗುತ್ತದೆ.

ABOUT THE AUTHOR

...view details