ಕರ್ನಾಟಕ

karnataka

ETV Bharat / bharat

ಪೊಲೀಸ್​​​​​ ಕಾನ್ಸ್​​ಟೇಬಲ್​​ನಿಂದ ನಿರಂತರ ಅತ್ಯಾಚಾರ; ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ - ಟ್ರಾಫಿಕ್ ಕಾನ್ಸ್​​ಟೇಬಲ್​ ರೇಪ್​​

ಕಳೆದ ಎರಡು ವರ್ಷಗಳಿಂದ ಯುವತಿಯೋರ್ವಳ ಮೇಲೆ ಆಕೆಯ ಚಿಕ್ಕಪ್ಪ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್​ದಲ್ಲಿ ನಡೆದಿದ್ದು, ಇದೀಗ ಪ್ರಕರಣ ದಾಖಲಾಗಿದೆ.

UP women rape
UP women rape

By

Published : Sep 13, 2021, 10:54 PM IST

ಕಾನ್ಪುರ್​​(ಉತ್ತರ ಪ್ರದೇಶ): ಟ್ರಾಫಿಕ್​ ಪೊಲೀಸ್ ಕಾನ್ಸ್​ಟೇಬಲ್​ವೋರ್ವ 25 ವರ್ಷದ ಯುವತಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಘಟನೆಯ ವಿಡಿಯೋ ಮೊಬೈಲ್​ನಲ್ಲಿ ಸೆರೆಹಿಡಿದು ಬ್ಲಾಕ್​ಮೇಲ್ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರಿಂದ ಮನನೊಂದು ಇದೀಗ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅತ್ಯಾಚಾರವೆಸಗಿರುವ ಪೊಲೀಸ್ ಕಾನ್ಸ್​ಟೇಬಲ್​ ಖುದ್ದಾಗಿ ಯುವತಿಯ ಚಿಕ್ಕಪ್ಪನಾಗಿದ್ದು, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಮನನೊಂದು ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಆಕೆಯ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಉಪ ಪೊಲೀಸ್​ ಆಯುಕ್ತ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದಿತ ಮಗಳು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹಳಲ್ಲ : ಸುಪ್ರೀಂಕೋರ್ಟ್​​

ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಯಾವುದೇ ವ್ಯಕ್ತಿಯ ಬಂಧನ ಮಾಡಿಲ್ಲ. ಯುವತಿ ಮೂಲತಃ ಮಿರ್ಜಾಪುರ್​​ ಜಿಲ್ಲೆಯವಳಾಗಿದ್ದು, 2019ರಲ್ಲಿ ಅಲಹಾಬಾದ್​​ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾಗಲು ಟ್ರಾಫಿಕ್​ ಹೆಡ್​ ಪೊಲೀಸ್ ಕಾನ್ಸ್​ಟೇಬಲ್​ ಆಗಿರುವ ಚಿಕ್ಕಪ್ಪ ಆಕೆಯನ್ನು ಕರೆಯಿಸಿಕೊಂಡಿದ್ದ. ಇದಾದ ಬಳಿಕ ಹೋಟೆಲ್​​ವೊಂದಕ್ಕೆ ಕರೆದುಕೊಂಡು ಹೋಗಿ, ತಂಪು ಪಾನಿಯಲ್ಲಿ ಮತ್ತು ಬರುವ ಔಷಧಿ ನೀಡಿ, ಅತ್ಯಾಚಾರವೆಸಗಿದ್ದಾನೆ. ಇದರ ವಿಡಿಯೋ ಮಾಡಿ, ಮೇಲಿಂದ ಮೇಲೆ ಬ್ಲಾಕ್​ಮೇಲ್​ ಮಾಡಿ, ಮೇಲಿಂದ ಮೇಲೆ ಅತ್ಯಾಚಾರವೆಸಗಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ.

ಸಂತ್ರಸ್ತೆ ಗರ್ಭಿಣಿಯಾಗುತ್ತಿದ್ದಂತೆ ಆಕೆಗೆ ಗರ್ಭನಿರೋಧಕ ಮಾತ್ರ ಸಹ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದು, ಕಳೆದ ಭಾನುವಾರ ಹೊಟೇಲ್​ವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಲು ಯತ್ನಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಇದರ ಬೆನ್ನಲ್ಲೇ ಗಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದಾಳೆಂದು ತಿಳಿದು ಬಂದಿದೆ. ತಕ್ಷಣವೇ ಘಟನಾ ಅಲ್ಲಿಗೆ ತೆರಳಿರುವ ಪೊಲೀಸರು ಯುವತಿಯ ರಕ್ಷಣೆ ಮಾಡಿದ್ದಾರೆ.

ಕೋರ್ಟ್​ನಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿದ ನಂತರ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಬಂಧನ ಮಾಡಲಾಗುವುದು ಎಂದು ಪ್ರಮೋದ್ ಕುಮಾರ್ ಭರವಸೆ ನೀಡಿದ್ದಾರೆ.

ABOUT THE AUTHOR

...view details