ಕರ್ನಾಟಕ

karnataka

ETV Bharat / bharat

ತಂದೆ, ಎಸ್​ಪಿ, ಬಿಎಸ್​​ಪಿ ಕಾರ್ಯಕರ್ತರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಭದ್ರತೆ - ಬಹುಜನ ಸಮಾಜವಾದಿ ಕಾರ್ಯಕರ್ತರಿಂದ ಅತ್ಯಾಚಾರ ಆರೋಪ

ಹೆತ್ತ ತಂದೆ, ಎಸ್​ಪಿ, ಬಿಎಸ್​ಪಿ ಕಾರ್ಯಕರ್ತರು ಮತ್ತು ಅವರ ಸಂಬಂಧಿಗಳೂ ಕೆಲವು ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯೋರ್ವಳು ಪೊಲೀಸರಿಗೆ ತಿಳಿಸಿದ್ದು, ಆಕೆಗೆ ಭದ್ರತೆ ಒದಗಿಸಲಾಗಿದೆ.

UP rape survivor provided security
ತಂದೆ ಹಾಗೂ ಎಸ್​ಪಿ, ಬಿಎಸ್​​ಪಿ ಕಾರ್ಯಕರ್ತರಿಂದ ಅತ್ಯಾಚಾರ ಆರೋಪ ಪ್ರಕರಣ: ಬಾಲಕಿಗೆ ಭದ್ರತೆ

By

Published : Oct 14, 2021, 10:38 AM IST

ಲಲಿತಪುರ(ಉತ್ತರ ಪ್ರದೇಶ): 17 ವರ್ಷದ ಬಾಲಕಿಯೋರ್ವಳು ತನ್ನ ತಂದೆ ಮತ್ತು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಾರ್ಟಿಯ ಕಾರ್ಯಕರ್ತರು ಸೇರಿ ಸುಮಾರು 28 ಮಂದಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದು, ಆಕೆಗೆ ಭದ್ರತೆ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಲಿತಪುರ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಾಠಕ್, 'ಆಕೆಯ ಮೇಲೆ ಅತ್ಯಾಚಾರವಾಗಿರುವುದು ದೃಢವಾಗಿದೆ. ಬುಧವಾರ ಸೆಕ್ಷನ್ 164ರ ಅಡಿಯಲ್ಲಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜೊತೆಗೆ ಐದು ತಂಡಗಳನ್ನು ಪ್ರಕರಣದ ವಿಚಾರಣೆಗೆ ರಚಿಸಲಾಗಿದೆ. ಈಗಾಗಲೇ ಆಕೆಯ ತಂದೆಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಆಕೆ ಹೇಳಿರುವವರನ್ನು ಬಂಧಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಪ್ರಕರಣ ಸಾಕಷ್ಟು ರಾಜಕೀಯ ಒತ್ತಡವನ್ನು ಸೃಷ್ಟಿಸಿದ್ದು, ಕೆಲವರು ಈ ಆರೋಪ ಸುಳ್ಳು ಎಂದು ಕೆಲವು ಪ್ರಾಧಿಕಾರಗಳಿಗೆ ಮೊರೆ ಹೋಗಿದ್ದಾರೆ. ಬಾಲಕಿಗೆ ಈಗ ಪೊಲೀಸರಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ:ಮಗಳ ಮೇಲೆ ಅತ್ಯಾಚಾರವೆಸಗಿ ವೇಶ್ಯಾವಾಟಿಕೆಗೆ ತಳ್ಳಿದ ತಂದೆ.. SP ಜಿಲ್ಲಾಧ್ಯಕ್ಷ ಸೇರಿ 28 ಮಂದಿ ವಿರುದ್ಧ FIR

ABOUT THE AUTHOR

...view details