ಇಂದೋರ್(ಮಧ್ಯಪ್ರದೇಶ): ಬಡ ರೈತರು ಸಾಮಾನ್ಯವಾಗಿ ತಮ್ಮ ಮಕ್ಕಳ ಮದುವೆಗಳನ್ನು ಸಾಮೂಹಿಕ ಮದುವೆ ಕಾರ್ಯಕ್ರಮ, ಜಾತ್ರೆ ಅಥವಾ ಯಾವುದಾದ್ರೂ ದೇವಸ್ಥಾನಗಳಲ್ಲಿ ಮಾಡುವುದುಂಟು. ಆದರೆ, ಇಲ್ಲೋರ್ವ ರೈತ ತನ್ನ ಮಗನ ಮದುವೆಯನ್ನು ಯಾವುದೇ ಶ್ರೀಮಂತರ ಮಕ್ಕಳಿಗಿಂತಲೂ ಕಡಿಮೆ ಮಾಡಿಲ್ಲ. ಆತನ ಮೆರವಣಿಗೆಗೋಸ್ಕರ ಹೆಲಿಕಾಪ್ಟರ್ ಹಾಗೂ ಮದುವೆ ಮಂಟಪಕ್ಕೆ ಕರೆತರಲು ಜಾಗ್ವಾರ್ ಕಾರು ಬಳಕೆ ಮಾಡಿದ್ದಾನೆ.
ತನ್ನ ಮಗನ ಮದುವೆಯನ್ನು ಹೆಲಿಕಾಪ್ಟರ್ನಲ್ಲಿ ಮೆರವಣಿಗೆ ಮಾಡಬೇಕೆಂಬ ಕನಸು ಕಂಡಿದ್ದ ರೈತ, ಅದೇ ರೀತಿ ಮಾಡಿದ್ದಾನೆ. ವರನ ಮನೆಯಿಂದ ವಧುನ ಊರಿಗೆ ಮೆರವಣಿಗೆ ಮೂಲಕ ಹೊರಡಲು ಎಲ್ಲರೂ ಸಜ್ಜಾಗಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಎಲ್ಲರಿಗೂ ಅಚ್ಚರಿ ಕಾದಿತ್ತು. ಖುದ್ದಾಗಿ ಮಗನಿಗೂ ಅಪ್ಪನ ಯೋಜನೆ ತಿಳಿದಿರಲಿಲ್ಲ. ವರನನ್ನು ಹೊತ್ತೊಯ್ಯಲು ಹೆಲಿಕಾಪ್ಟರ್ ಬಂದಿದೆ. ಈ ವೇಳೆ ತಂದೆಯ ಅಚ್ಚರಿಯ ಯೋಜನೆ ಬಯಲಾಗಿದೆ. ವಧುವಿನ ಊರು ತಲುಪುತ್ತಿದ್ದಂತೆ ಅವರನ್ನು ಕಲ್ಯಾಣ ಮಂಟಪದವರೆಗೂ ಕರೆದುಕೊಂಡು ಹೋಗಲು ಜಾಗ್ವಾರ್ ಕಾರು ಬಂದಿದೆ. ಅದಕ್ಕೆ ಸಂಪೂರ್ಣವಾಗಿ ಅಲಂಕಾರ ಮಾಡಲಾಗಿತ್ತು. ಇದನ್ನೂ ನೋಡಿರುವ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಸಂಪ್ರದಾಯದಂತೆ ಕುದುರೆ ಮೆರವಣಿಗೆ ಸಹ ಮಾಡಿಸಲಾಗಿದೆ.