ಚಂಡೀಗಢ :ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಸರ್ಕಾರಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಪಂಜಾಬ್‌ನ ಗ್ರಾಮೀಣಾಭಿವೃದ್ಧಿ ನಿಧಿಯ 1,100 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಕೇಂದ್ರದ ಈ ನಿರ್ಧಾರದಿಂದ ಎಎಪಿ ಸರ್ಕಾರ ದೊಡ್ಡ ಸಮಸ್ಯೆ ಎದುರಿಸಬೇಕಾದ ಸಾಧ್ಯತೆ ಇದೆ.
ಮೊದಲು ಪಂಜಾಬ್ ಗ್ರಾಮೀಣಾಭಿವೃದ್ಧಿ ಕಾಯಿದೆ-1987 ತಿದ್ದುಪಡಿ ಮಾಡಿ ಗ್ರಾಮೀಣಾಭಿವೃದ್ಧಿ ನಿಧಿಯನ್ನು ತಡೆಹಿಡಿಯಲಾಗಿದೆ. ಗ್ರಾಮೀಣಾಭಿವೃದ್ಧಿ ನಿಧಿಯ ಹಣವನ್ನು ಖರೀದಿ ಕೇಂದ್ರಗಳ ಅಭಿವೃದ್ಧಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಹಿಂದೆ 1,200 ಕೋಟಿ ರೂ.ಗೆ ತಡೆ : ಈ ಹಿಂದೆಯೂ ಕೇಂದ್ರ ಸರ್ಕಾರ ಪಂಜಾಬ್ ಸರ್ಕಾರದ 1,200 ಕೋಟಿ ರೂಪಾಯಿಗಳನ್ನು ತಡೆ ಹಿಡಿದಿತ್ತು. ಆ ಸಮಯದಲ್ಲಿ ಪಂಜಾಬ್ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿತ್ತು. ಆದರೆ, ತಿದ್ದುಪಡಿ ಮಾಡಲಿಲ್ಲ. ರೈತರ ಸಾಲ ಮನ್ನಾಗೆ ಹಣವನ್ನು ವಿತರಿಸಲಾಯಿತು. ಹೀಗಾಗಿ, ಕೇಂದ್ರ ಕಾಯಿದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆಗಳು ಶುರುವಾಗಿವೆ.
ಸಾಲ ಮನ್ನಾಗೆ ಕೇಂದ್ರ ಆಕ್ಷೇಪ :ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ರೈತರ ಸಾಲ ಮನ್ನಾಗೆ ಹಂಚಿಕೆ ಮಾಡಿದ್ದರು. ಇದೇ ಕಾರಣದಿಂದಾಗಿ ಕೇಂದ್ರದಿಂದ ಹಣ ಬಿಡುಗಡೆ ಮಾಡುವ ಮೊದಲು ನಿರ್ದಿಷ್ಟ ಯೋಜನೆಗೆ ಹಣ ವಿನಿಯೋಗಿಸಬೇಕೆಂದು ನಿಗದಿಪಡಿಸಲಾಗಿದೆ.
ಇದನ್ನೂ ಓದಿ:ಪಂಜಾಬ್‌ನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಆಪ್ ಸರ್ಕಾರ ನಿರ್ಧಾರ