ನವದೆಹಲಿ :ಕೇಂದ್ರ ಸರ್ಕಾರವು ಕೋವಿಡ್ ಸಂಕಷ್ಟಕ್ಕೆ ತುತ್ತಾಗಿರುವ ರೈತರ ನೆರವಿಗೆ ಧಾವಿಸಿದೆ. ಭತ್ತದ ಬೆಂಬಲ ಬೆಲೆಯನ್ನ ಏರಿಕೆ ಮಾಡಿದೆ. 2021-22ನೇ ಸಾಲಿನಲ್ಲಿ ಈ ಮೊದಲು ಪ್ರತಿ ಕ್ವಿಂಟಾಲ್ಗೆ 1,868 ರೂ. ಎಂಎಸ್ಪಿ ನೀಡಲಾಗುತ್ತಿತ್ತು. ಈಗ 72 ರೂಪಾಯಿಗೆ ಹೆಚ್ಚಿಸಿ ಪ್ರತಿ ಕ್ವಿಂಟಾಲ್ಗೆ 1,940 ರೂಪಾಯಿ ನೀಡಲು ನಿರ್ಧರಿಸಿದೆ. ಈ ಕುರಿತು ನಿರ್ಧಾರ ಪ್ರಕಟಿಸಿರುವ ಸಚಿವ ನರೇಂದ್ರ ಸಿಂಗ್ ತೋಮರ್, ಮುಂದಿನ ಮಾರುಕಟ್ಟೆ ವರ್ಷದಲ್ಲಿ ಬೆಳೆಗೆ ಶೇ.62ರಷ್ಟು ಎಂಎಸ್ಪಿ ಹಾಗೂ ಉದ್ದಿಗೆ ಶೇ.65ರಷ್ಟು ಹೆಚ್ಚಿಲಾಗುವುದು ಎಂದಿದ್ದಾರೆ.
ಅಲ್ಲದೆ ಕೃಷಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನ ಹೆಚ್ಚಿಸಲಾಗುತ್ತಿದೆ. ಭವಿಷ್ಯದಲ್ಲಿಯೂ ಇದನ್ನು ಹೆಚ್ಚಿಸಲಾಗುತ್ತದೆ ಎಂದಿದ್ದು, ಈ ಮೂಲಕ ಎಂಎಸ್ಪಿಗಳ ಏರಿಕೆ ಕುರಿತು ಸುಳಿವು ನೀಡಿದ್ದಾರೆ. ಇದಲ್ಲದೆ ಭಾರತೀಯ ರೈಲ್ವೆ ಸಂಬಂಧಿಸಿ ಕ್ಯಾಬಿನೆಟ್ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಭಾರತೀಯ ರೈಲ್ವೆಗೆ 5 ಮೆಗಾ ಹರ್ಟ್ಸ್ ಸ್ಪೆಕ್ಟ್ರಮ್ನ 700 ಮೆಗಾಹರ್ಟ್ಸ್ ಬ್ಯಾಂಡ್ ನೀಡಲು ಅನುಮೋದನೆ ನೀಡಲಾಗಿದೆ.