ಹೈದರಾಬಾದ್: ಉಕ್ರೇನ್ ದೇಶದ ಬಖ್ಮುತ್ ಎಂಬ ಪ್ರದೇಶದಲ್ಲಿ ನಡೆದ ಕದನಲ್ಲಿ ಸೈನಿಕನ ಎದೆಯಲ್ಲಿ ಸಿಲುಕಿದ್ದ ಜೀವಂತ ಗ್ರೆನೇಡ್ ಅನ್ನು ಹೊರ ತೆಗೆಯುವ ಮೂಲಕ ಉಕ್ರೇನ್ ವೈದ್ಯರೊಬ್ಬರು ಪವಾಡ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಗ್ರೆನೇಡ್ ಸ್ಫೋಟಿಸಬಹುದು ಎಂದು ತಿಳಿದ ನಂತರವೂ ಎದೆ ಗುಂದದೆ ಶಸ್ತ್ರಚಿಕಿತ್ಸೆಯನ್ನು ಆಂಡ್ರಿ ವೆರ್ಬಾ ಎಂಬ ವೈದ್ಯನು ದೈರ್ಯಗೆಡದೇ ಪೂರ್ಣಗೊಳಿಸಿದ್ದಾರೆ.
"ಹೃದಯಕ್ಕೆ ಆಗುವ ಪ್ರತಿಯೊಂದು ಗಾಯವೂ ಮಾರಣಾಂತಿಕವಲ್ಲ, ಯೋಧನ ದೇಹದಲ್ಲಿ ಸಿಲುಕಿದ್ದ ಸ್ಫೋಟಗೊಳ್ಳದ ವೋಗ್ ಗ್ರೆನೇಡ್ ಅನ್ನು ಹೊರ ತೆಗೆದುಹಾಕಲು ಮಿಲಿಟರಿ ವೈದ್ಯರು ದೀರ್ಘಾವಧಿ ಕಾಲ ಕಾರ್ಯಾಚರಣೆ ನಡೆಸಿದರು. ಇಬ್ಬರು ಸಪ್ಪರ್‌ಗಳ ಸಮ್ಮುಖದಲ್ಲಿ ಬಾಂಬ್ ಅನ್ನು ವೈದ್ಯರ ಮೂಲಕ ತೆಗೆಯಲಾಗಿದೆ ಎಂದು" ಉಕ್ರೇನ್‌ನ ರಕ್ಷಣಾ ಉಪ ಸಚಿವರು ಹನ್ನಾ ಮಾಲಿಯಾರ್ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಉಕ್ರೇನ್‌ನ ಸಶಸ್ತ್ರ ಪಡೆಗಳ ಅತ್ಯಂತ ಅನುಭವಿ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಆಂಡ್ರಿ ವೆರ್ಬಾ ಅವರು, ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ, ಯಾವುದೇ ಕ್ಷಣದಲ್ಲಿ ಗ್ರೆನೇಡ್ ಸ್ಫೋಟಗೊಳ್ಳಬಹುದಾಗಿರುವುದರಿಂದ ಎಲೆಕ್ಟ್ರೋಕೋಗ್ಯುಲೇಷನ್ ಇಲ್ಲದೇ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಉಕ್ರೇನಿಯನ್ ಸಚಿವರು ಹೇಳಿದರು. "ಆಪರೇಟಿವ್ ಇಂಟರ್ವೆನ್ಷನ್ ಯಶಸ್ವಿಯಾಗಿದೆ, ಮತ್ತು ಗಾಯಗೊಂಡ ಸೈನಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಚೇತರಿಸಿಕೊಳ್ಳುವುದಕ್ಕಾಗಿ ಬೇರೆಡೆ ಕಳುಹಿಸಲಾಗಿದೆ" ಎಂದು ಸಚಿವರು ಹೇಳಿದರು.
ವರದಿಗಳ ಪ್ರಕಾರ, ರೈಫಲ್‌ಗೆ ಜೋಡನೆಯಾಗಿದ್ದ ಗ್ರೆನೇಡ್ ಲಾಂಚರ್‌ನಿಂದ ಪೈರಿಂಗ್ ಮಾಡಲಾಗಿದ್ದು, ಅದು ನೇರವಾಗಿ ಸೈನಿಕನ ಎದೆಗೆ ತಗುಲಿದೆ. ಆಪರೇಷನ್ ಮಾಡುವ ಸಂದರ್ಭದಲ್ಲಿ ಸ್ಫೋಟದ ಭೀತಿಯಿಂದಾಗಿ ಸಹಾಯಕ್ಕಾಗಿ ಇನ್ನಿಬ್ಬರು ಸೈನಿಕರ ಜತೆಗೂಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅವರು ಫೇಸ್ಬುಕ್ನಲ್ಲಿ ಮಾಹಿತಿ ನೀಡಿದ್ದಾರೆ.