ಕರ್ನಾಟಕ

karnataka

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿ ಕಳುಹಿಸಲು ಯುಎಇ ಸಿದ್ಧತೆ

By

Published : Apr 30, 2022, 12:05 PM IST

ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಿದ್ಧತೆ ನಡೆಸಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಗಗನಯಾತ್ರಿಯನ್ನು 6 ತಿಂಗಳ ಮಟ್ಟಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ನಲ್ಲಿ ಕಳುಹಿಸಲು ನಿರ್ಧರಿಸಿದೆ.

uae-to-send-astronaut-on-6-month-mission-to-space-station
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಯನ್ನು ಕಳುಹಿಸಲು ಯುಎಇ ಸಿದ್ಧತೆ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಿದ್ಧತೆ ನಡೆಸಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಗಗನಯಾತ್ರಿಯನ್ನು 6 ತಿಂಗಳ ಮಟ್ಟಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ನಲ್ಲಿ ಕಳುಹಿಸಲು ನಿರ್ಧರಿಸಿದೆ. ಅಮೆರಿಕದ ಪ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಸಂಸ್ಥೆಯಿಂದ ಮುಂದಿನ ವರ್ಷ ಈ ರಾಕೆಟ್ ಉಡಾವಣೆ ಮಾಡಲಾಗುತ್ತದೆ.

ಇದು ಯುಎಇನ ಎರಡನೇ ಬಾಹ್ಯಾಕಾಶ ಮಿಷನ್ ಆಗಿದ್ದು, 2019ರಲ್ಲಿ ಕೈಗೊಂಡ ಮೊದಲ ಬಾಹ್ಯಾಕಾಶ ಯಾನದಲ್ಲಿ ಮೇ. ಹಝ್ಝಾ ಅಲ್ ಮನ್ಸೂರಿ ಎಂಟು ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದರು. ಈ ಸಲದ ಗಗನಯಾತ್ರಿ ಹೆಸರನ್ನು ಯುಎಇ ಬಹಿರಂಗಪಡಿಸಿಲ್ಲ. ಸ್ಪೇಸ್‌ಎಕ್ಸ್ ಸಂಸ್ಥೆ ನಿರ್ಮಿಸಿದ ರಾಕೆಟ್‌ನಲ್ಲಿನ ಗಗನಯಾನಕ್ಕೆ ದೇಶವು ಎಷ್ಟು ಪಾವತಿಸಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿಲ್ಲ.

ಕಳೆದ ವರ್ಷ, ಯುಎಇ ತನ್ನ ಅಮಲ್ ಅಥವಾ ಹೋಪ್ ಉಪಗ್ರಹವನ್ನು ಮಂಗಳದ ಕಕ್ಷೆಗೆ ಇರಿಸಿದೆ ಇದು ಅರಬ್ ದೇಶದ ಮೊದಲ ಯತ್ನವಾಗಿತ್ತು. ಜೊತೆಗೆ 2024 ರಲ್ಲಿ, ಚಂದ್ರನ ಮೇಲೆ ಮಾನವರಹಿತ ಬಾಹ್ಯಾಕಾಶ ನೌಕೆ ಇರಿಸಲು ಯುಎಇ ಯೋಜನೆ ರೂಪಿಸಿದೆ. ಯುಎಇ 2117 ರ ವೇಳೆಗೆ ಮಂಗಳ ಗ್ರಹದಲ್ಲಿ ಮಾನವ ವಸಾಹತು ನಿರ್ಮಿಸುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿದೆ.

ಓದಿ :ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ: ಇಸ್ರೋದ 4,000 ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲು ಸರ್ಕಾರದ ನಿರ್ಧಾರ

ABOUT THE AUTHOR

...view details