ಕರ್ನಾಟಕ

karnataka

ETV Bharat / bharat

ಆಮ್ಶಿಪೋರಾ ಎನ್‌ಕೌಂಟರ್‌ : ಇಬ್ಬರು ಉಗ್ರರನ್ನ ಸದೆಬಡಿದ ಭದ್ರತಾ ಪಡೆ.. ಓರ್ವ ನಾಗರಿಕ ಸಾವು - Jammu Kashmir encounter

ಶೋಪಿಯಾನ್ ಜಿಲ್ಲೆಯ ಆಂಶಿಪೋರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

Two Militants killed in Amshipora Encounter
Two Militants killed in Amshipora Encounter

By

Published : Feb 25, 2022, 12:12 PM IST

Updated : Feb 25, 2022, 7:26 PM IST

ಆಮ್ಶಿಪೋರಾ(ಜಮ್ಮು-ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಆಂಶಿಪೋರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸದೆಬಡಿದಿದೆ. ಆದರೆ ಘಟನೆಯಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದಾರೆ.

ಇಂದು ನಸುಕಿನ ಜಾವ ಆಂಶಿಪೋರಾ ಗ್ರಾಮದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಕುರಿತು ಪೊಲೀಸರು ಹಾಗೂ ಸಿಆರ್​ಪಿಎಫ್​ ಸಿಬ್ಬಂದಿ ಜಂಟಿಯಾಗಿ ನಿಖರ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಶಂಕಿತ ಸ್ಥಳದ ಸುತ್ತ ಸಿಕ್ಕಿಬಿದ್ದಿರುವ ನಾಗರಿಕರನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ, ಹತ್ತಿರದ ಮನೆಯಲ್ಲಿ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ಆಮ್ಶಿಪೋರಾ ಎನ್‌ಕೌಂಟರ್​ನಲ್ಲಿ ಇಬ್ಬರು ಉಗ್ರರ ಸದೆಬಡಿದ ಭದ್ರತಾ ಪಡೆ

ಈ ವೇಳೆ ಆಂಶಿಪೋರಾದ ಅಬ್ದುಲ್ ರಹೀಮ್ ಖಾನ್ ಅವರ ಪುತ್ರ ಶಕೀಲ್ ಅಹ್ಮದ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ಇದನ್ನೂ ಓದಿ: ಸಂಕೇಶ್ವರದಲ್ಲಿ ಒಂದೇ ಬೈಕ್ ಮೇಲೆ ನಾಲ್ವರ ಸವಾರಿ: ನಿಯಂತ್ರಣ ತಪ್ಪಿ ಬಿದ್ದು ನಾಲ್ವರೂ ಸಾವು

ಇವರಿಬ್ಬರೂ ಸ್ಥಳೀಯರೇ ಆಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್​-ಇ-ತೊಯ್ಬಾ (ಎಲ್ಇಟಿ)ದೊಂದಿಗೆ ಸಂಪರ್ಕ ಹೊಂದಿದ್ದರು. ಅಲ್ಲದೇ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ

Last Updated : Feb 25, 2022, 7:26 PM IST

ABOUT THE AUTHOR

...view details