ತಿರುವನಂತಪುರಂ(ಕೇರಳ) : ಹತ್ಯೆಗಳು, ಘರ್ಷಣೆಗಳ ಬೆನ್ನಲ್ಲೇ ಬೈಕ್ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು 10ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ ಘಟನೆ ಕೇರಳದ ಬಲರಾಮಪುರಂನಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಲರಾಮಪುರಂ, ಎರುತಾವೂರು ಮತ್ತು ರಸೆಲ್‌ಪುರಂ ಪ್ರದೇಶಗಳಲ್ಲಿ ನಿಲ್ಲಿಸಿದ್ದ 9 ಲಾರಿಗಳು, 3 ಕಾರುಗಳು ಮತ್ತು ನಾಲ್ಕು ಬೈಕ್‌ಗಳನ್ನು ಈ ಇಬ್ಬರೂ ಜಖಂಗೊಳಿಸಿದ್ದರು.
ಎರುತಾವೂರು ಮೂಲದ ಅನು ಎಂಬುವರ ಅಂಗಡಿ ಮುಂದೆ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸಂಪೂರ್ಣ ಜಖಂಗೊಂಡಿದೆ. ದಾಳಿಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕ ಜಯಚಂದ್ರ ಮತ್ತು ಬೈಕ್ನಲ್ಲಿದ್ದ ಶೀಬಾ ಕುಮಾರಿ ಗಾಯಗೊಂಡಿದ್ದಾರೆ.