ಕರ್ನಾಟಕ

karnataka

ETV Bharat / bharat

ಬೈಕ್​ ರೇಸಿಂಗ್​ ವೇಳೆ ಎದುರಿನ ದ್ವಿಚಕ್ರ ವಾಹನಕ್ಕೆ ಡಿಕ್ಕಿ.. ಇಬ್ಬರು ಯುವಕರ ಸಾವು! - ಕೇರಳ ಅಪರಾಧ ಸುದ್ದಿ

ಬೈಕ್​ ರೇಸಿಂಗ್​ ವೇಳೆ ಎದುರಿನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

killed as bike racing goes wrong in Kerala, Kerala crime news, Thiruvananthapuram bike accident news, ಕೇರಳದಲ್ಲಿ ಬೈಕ್ ರೇಸಿಂಗ್  ವೇಳೆ ಅಪಘಾತ, ಕೇರಳ ಅಪರಾಧ ಸುದ್ದಿ, ತಿರುವನಂತಪುರಂ ಬೈಕ್ ಅಪಘಾತ ಸುದ್ದಿ,
ಬೈಕ್​ ಅಪಘಾತದ ದೃಶ್ಯ

By

Published : Jun 20, 2022, 9:08 AM IST

ತಿರುವನಂತಪುರಂ: ಎರಡು ಬೈಕ್​ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವಿಝಿಂಜಂ ಮುಕ್ಕೋಳದಲ್ಲಿ ನಡೆದಿದೆ. ಮೃತರನ್ನು ಚೌವಾರ ಮೂಲದ ಶರತ್ ಮತ್ತು ವಟ್ಟಿಯೂರ್ಕಾವು ನೆಟ್ಟಯಂ ಮೂಲದ ಮುಹಮ್ಮದ್ ಹ್ಯಾರಿಸ್ ಎಂದು ಗುರುತಿಸಲಾಗಿದೆ.

ಬೈಕ್​ ಅಪಘಾತದ ದೃಶ್ಯ

ಭಾನುವಾರ ಸಂಜೆ (ಜೂನ್ 19) ಮುಕ್ಕೋಳದ ಬೈಪಾಸ್​ನಲ್ಲಿ ಈ ಘಟನೆ ನಡೆದಿದೆ. ಯುವಕರು ರೇಸ್‌ನಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಓದಿ:ಹಿಟ್​ ಅಂಡ್​​ ರನ್​: ನೋಡು-ನೋಡುತ್ತಿದ್ದಂತೆ ವ್ಯಕ್ತಿಗೆ ಗುದ್ದಿ ಕಾರಿನ ಸಮೇತ ಪರಾರಿಯಾದ ಚಾಲಕ!

ಸುದ್ದಿ ತಿಳಿದ ತಕ್ಷಣ ವಿಝಿಂಜಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕೈಗೊಂಡರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ತಿರುವನಂತಪುರಂ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಿದರು. ಸದ್ಯ ಅಪಘಾತದ ದೃಶ್ಯ ಮೊಬೈಲ್​ವೊಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details