ಪಾಟ್ನಾ(ಬಿಹಾರ):ಕೊರೊನಾ ಸೋಂಕಿನ ಎರಡನೇ ಅಲೆ ಬಿಹಾರ ಸೇರಿದಂತೆ ಇಡೀ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ದೂರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಗೆ ಒತ್ತು ನೀಡಲಾಗುತ್ತಿದೆ.
ಆದರೆ ಈ ಎಲ್ಲದರ ಹೊರತಾಗಿಯೂ, ಜನರು ಇನ್ನೂ ವೈರಸ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಬಿಹಾರದ ಇಬ್ಬರು ವಿದ್ಯಾರ್ಥಿಗಳು ಓರ್ವ ವ್ಯಕ್ತಿಯು ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದರೆ, ಅದನ್ನು ಪತ್ತೆಹಚ್ಚುವಂತಹ ಗ್ಯಾಜೆಟ್ ಅನ್ನು ರೂಪಿಸಿದ್ದಾರೆ.
ಈ ಗ್ಯಾಜೆಟ್ ಎಚ್ಚರಿಕೆಯ ಶಬ್ದವನ್ನು ನೀಡುತ್ತದೆ. ಇದು ಜನರು ಕೊರೊನಾ ಸೋಂಕಿತ ವ್ಯಕ್ತಿಯಿಂದ ದೂರವಿರಲು ಮತ್ತು ಸಾಮಾಜಿಕ ಅಂತರವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
ಕೊರೊನಾ ಅಲರ್ಟ್ ನೀಡುವ ಗ್ಯಾಜೆಟ್ ತಯಾರಿಸಿದ ವಿದ್ಯಾರ್ಥಿಗಳು ಇದನ್ನೂ ಓದಿ:ದೇಶದಲ್ಲಿ ಮತ್ತೆ ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ
ಪಾಟ್ನಾದ ಕಿಲ್ಕರಿಯ ಇಬ್ಬರು ವಿದ್ಯಾರ್ಥಿಗಳು ಕೊರೊನಾ ಅಲರ್ಟ್ ಸಾಧನವನ್ನು ರಚಿಸಿದ್ದಾರೆ. ಈ ಸಾಧನವನ್ನು 10 ನೇ ತರಗತಿಯ ಅರ್ಪಿತ್ ಮತ್ತು 12 ನೇ ತರಗತಿಯ ಅಭಿಜೀತ್ ತಯಾರಿಸಿದ್ದಾರೆ.
ಸಂವೇದಕಗಳನ್ನು ಹೊಂದಿದ ಈ ಗ್ಯಾಜೆಟ್ ದೇಹದ ತಾಪಮಾನವನ್ನು ಒಂದು ಮೀಟರ್ ದೂರದಿಂದ ಅಳೆಯಬಹುದು. ಇದು ಗಾತ್ರದಲ್ಲಿ ಚಿಕ್ಕದಾಗಿದೆ ಮತ್ತು ಶರ್ಟ್ ಜೇಬಿನಲ್ಲಿ ಇಡಬಹುದು. ವ್ಯಕ್ತಿಯ ದೇಹದ ಉಷ್ಣತೆಯು ಅಧಿಕವಾಗಿದ್ದಾಗ ಅಥವಾ ಅವನು ಕೆಮ್ಮಿದಾಗ ಅಥವಾ ಸೀನುವಾಗ ಅದು ಎಚ್ಚರಿಕೆಯ ಶಬ್ದವನ್ನು ನೀಡುತ್ತದೆ.
ಕೇಂದ್ರ ಸರ್ಕಾರದಿಂದ ಪೇಟೆಂಟ್ ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕೋವಿಡ್ ಉಲ್ಬಣ: 24 ಗಂಟೆಯಲ್ಲಿ ಅರ್ಧಲಕ್ಷಕ್ಕೂ ಅಧಿಕ ಕೋವಿಡ್ ಕೇಸ್, 297 ಸಾವು!
"ಮಾರುಕಟ್ಟೆಯಲ್ಲಿ ಬರುವ ಸಾಧನಗಳ ಬೆಲೆ 10,000 ರಿಂದ 12,000 ರೂಪಾಯಿಗಳಷ್ಟಿದ್ದು, ಅದನ್ನು ಸಾಮಾನ್ಯ ವ್ಯಕ್ತಿಗೆ ಖರೀದಿಸಲಾಗುವುದಿಲ್ಲ. ಆದರೆ, ನಾವು ತಯಾರಿಸಿದ ಸಾಧನದ ಬೆಲೆ ಪ್ರಸ್ತುತ 400 ರಿಂದ 600 ರೂಪಾಯಿಗಳಷ್ಟಿದ್ದು, ಸಾಮಾನ್ಯ ಜನರಿಗೆ ಇದು ಸುಲಭವಾಗಿ ಲಭಿಸುತ್ತದೆ. ಆದಾಗ್ಯೂ, ಈ ಸಾಧನವನ್ನು ಧರಿಸುವುದರಿಂದ ಕೊರೊನಾ ವೈರಸ್ ಇರುವಿಕೆಯನ್ನು ಖಚಿತಪಡಿಸುವುದಿಲ್ಲ. ಆದರೆ ಖಂಡಿತವಾಗಿಯೂ ಹೆಚ್ಚಿನ ತಾಪಮಾನವನ್ನು ಸೂಚಿಸುತ್ತದೆ" ಎಂದು ಅರ್ಪಿತ್ ಕುಮಾರ್ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವು ವಿದ್ಯಾರ್ಥಿಗಳು ತಯಾರಿಸಿರುವ ಈ ಗ್ಯಾಜೆಟ್‌ಗೆ ಪೇಟೆಂಟ್ ಸಹ ನೀಡಿದೆ. ಕಡಿಮೆ ದುಡ್ಡಿನ ಈ ಸಾಧನ ಜನರಿಗೆ ಅನುಕೂಲ ಆಗಲಿದೆ.