ಕರ್ನಾಟಕ

karnataka

ETV Bharat / bharat

ಭುವನೇಶ್ವರ ಸಂಸದೆ 'ಕಾಣೆಯಾಗಿದ್ದಾರೆ' ಪೋಸ್ಟರ್​: ಕೃತ್ಯ ಎಸಗಿದವರು ಬೇರಾರೂ ಅಲ್ಲ! - Bhubaneswar

ಸಾರಂಗಿಯ ಬಗ್ಗೆ ಕಾಣೆಯಾಗಿದ್ದಾರೆ ಎಂದು ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಈ ಸಂಬಂಧ ಭುವನೇಶ್ವರದ ಲಕ್ಷ್ಮಿ ಸಾಗರ್ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರೂ ಕೂಡ ಸಂಸದರ ಆಪ್ತರೇ ಅಗಿದ್ದಾರೆ.

Two Arrested in Bhubaneswar  Over Fixing Of Missing Posters Of Bhubaneswar MP Aparajita Sarangi
ಭುವನೇಶ್ವರ ಸಂಸದೆ ವಿರುದ್ಧ 'ಕಾಣೆಯಾಗಿದ್ದಾರೆ' ಫೋಸ್ಟ್​

By

Published : Feb 11, 2021, 9:47 PM IST

ಭುವನೇಶ್ವರ: ಭುವನೇಶ್ವರ ಸಂಸದೆ ಅಪರಾಜಿತಾ ಸಾರಂಗಿಯವರು ಕಾಣೆಯಾಗಿದ್ದಾರೆ ಎಂದು ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಈ ಸಂಬಂಧ ಭುವನೇಶ್ವರದ ಲಕ್ಷ್ಮಿ ಸಾಗರ್ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಪ್ರಕಟಣೆ ಪತ್ರ

ವಿಶೇಷವೆಂದರೆ, ಪೊಲೀಸರು ಬಂಧಿಸಿರುವ ಇಬ್ಬರು ಭುವನೇಶ್ವರ ಬಿಜೆಪಿ ಸಂಸದರ ಆಪ್ತರು ಎಂದು ತಿಳಿದುಬಂದಿದೆ. ಸಾರಂಗಿಯ ವೈಯಕ್ತಿಕ ಸಹಾಯಕ (ಪಿಎ) ಧನೇಶ್ವರ ಬಾರಿಕ್, ಜ್ಯೋತಿ ರಂಜನ್ ಪಾಂಡ ಬಂಧಿತರು. ಈ ಇಬ್ಬರೂ ಕೂಡ ಸಂಸದರ ಆಪ್ತರಾಗಿದ್ದಾರೆ. ಆದರೆ, ಸಂಸದರು ದೆಹಲಿಯಲ್ಲಿದ್ದಾಗ ಇಂತಹ ಪೋಸ್ಟರ್‌ಗಳನ್ನು ಯಾಕೆ ಅಂಟಿಸಲಾಗಿದೆ ಮತ್ತು ಆಕೆಯ ಆಪ್ತರೇ ಏಕೆ ಈ ಕೃತ್ಯ ಎಸಗಿದ್ದಾರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.

ಸಂಸದೆ ಪ್ರತಿಕ್ರಿಯೆ

ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ (ಎನ್‌ಎಂಎ) ರೂಪಿಸಿದ ಏಕಮ್ರಾ ಕ್ಷೇತ್ರಕ್ಕೆ ಪ್ರಸ್ತಾವಿತ ಪರಂಪರೆ ಉಪ-ಕಾನೂನುಗಳನ್ನು ಹಿಂತೆಗೆದುಕೊಳ್ಳದಿರುವ ಬಗ್ಗೆ ಸಂಸದರು ಮೌನ ಎಂದು ಪ್ರಶ್ನಿಸುವ ಚಿತ್ರದೊಂದಿಗೆ ಕಾಣೆಯಾಗಿದ್ದಾರೆ ಎಂದು ಪೋಸ್ಟರ್​ ಅಂಟಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಭುವನೇಶ್ವರ ಸಂಸದರು, ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಭುವನೇಶ್ವರದಲ್ಲಿ ಈ ಪೋಸ್ಟರ್‌ಗಳು ಬಂದಿವೆ ಎಂದು ಖುಷಿಪಟ್ಟಿದ್ದಾರೆ. ಈಗ ಲೋಕಸಭೆಯಲ್ಲಿರುವುದು ನನ್ನ ಕರ್ತವ್ಯ. ಭುವನೇಶ್ವರದಲ್ಲಿ ನಾನು ಕಾಣೆಯಾಗಿದ್ದೇನೆ ಎಂಬ ವಿಷಯ ನನಗೆ ಖುಷಿಯಾಗಿದೆ. ಇದು ನಿಜಕ್ಕೂ ಒಂದು ದೊಡ್ಡ ಭಾವನೆ ಎಂದಿದ್ದಾರೆ.

ABOUT THE AUTHOR

...view details