ಕರ್ನಾಟಕ

karnataka

ETV Bharat / bharat

ಟ್ರಕ್​ಗೆ ಗುದ್ದಿ ಕಂದಕಕ್ಕೆ ಉರುಳಿಬಿದ್ದ ಬಸ್​.. ಮಗು, ಮಹಿಳೆ ಸೇರಿ 6 ಮಂದಿ ದುರ್ಮರಣ - ಬಸ್​ ಪಲ್ಟಿ

ಪ್ರಯಾಣಿಕರನ್ನು ಹೊಂದಿದ್ದ ಬಸ್​ ಎದುರಿನಿಂದ ಬಂದ ಡಿಸಿಎಂ ಟ್ರಕ್​​ಗೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿ ಬಿದ್ದು 6 ಮಂದಿ ಸಾವನ್ನಪ್ಪಿದ ದುರ್ಘಟನೆ ಉತ್ತರಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ.

truck-bus-accident-in-uttara-pradesh
ಟ್ರಕ್​ಗೆ ಗುದ್ದಿ ಕಂದಕಕ್ಕೆ ಉರುಳಿ ಬಿದ್ದ ಬಸ್​

By

Published : Dec 14, 2022, 12:18 PM IST

ಫಿರೋಜಾಬಾದ್(ಉತ್ತರಪ್ರದೇಶ):ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಬಸ್​ ಎದುರಿನಿಂದ ಬಂದ ಟ್ರಕ್​​ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 21 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಉತ್ತರಪ್ರದೇಶದಲ್ಲಿ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲೂಧಿಯಾನದಿಂದ ರಾಯ್ ಬರೇಲಿಗೆ ತೆರಳುತ್ತಿದ್ದ ಸುಮಾರು 60 ಪ್ರಯಾಣಿಕರಿದ್ದ ಬಸ್, ಆಗ್ರಾ ಲಖನೌ ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಡಿಸಿಎಂ ಟ್ರಕ್​ಗೆ ರಭಸವಾಗಿ ಗುದ್ದಿದೆ. ಈ ವೇಳೆ ಬಸ್​ ಪಲ್ಟಿಯಾಗಿ ಪಕ್ಕದಲ್ಲಿದ್ದ ದೊಡ್ಡ ಕಂದಕಕ್ಕೆ ಬಿದ್ದಿದೆ. ಸ್ಥಳದಲ್ಲಿ ಆಕ್ರಂದನ ಕೇಳಿಬಂತು.

ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದು ಬಸ್​ನ ಒಳಗೆ ಸಿಲುಕಿದ್ದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ದುರಾದೃಷ್ಟವಶಾತ್​ 14 ತಿಂಗಳ ಮಗು, ಮಹಿಳೆ ಮತ್ತು ನಾಲ್ವರು ಪುರುಷರು ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

ಓದ:ಇವಳು ಎಲ್ಲರ ಮುದ್ದಿನ ಕಣ್ಮಣಿ.. ಸರ್ಕಾರಿ ಕಾಲೇಜಿನಲ್ಲಿ ಓದಿ ವಕೀಲಿಯಾದ ಮೊದಲ ತೃತೀಯಲಿಂಗಿ

ABOUT THE AUTHOR

...view details