ಕರ್ನಾಟಕ

karnataka

ETV Bharat / bharat

70 ವರ್ಷಗಳ ಬಳಿಕ ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ!

ಛತ್ತೀಸ್​ಗಡದ ದಂತೇವಾಡದಲ್ಲಿರುವ ಇಂದ್ರಾವತಿ ನದಿಗೆ ಅಡ್ಡಲಾಗಿರುವ ಮಾವೋವಾದಿ ಪೀಡಿತ ಪ್ರದೇಶ ಪಹುನ್‌ಹಾರ್ ಗ್ರಾಮದಲ್ಲಿ 70 ವರ್ಷಗಳ ಬಳಿಕ ಗಣರಾಜ್ಯೋತ್ಸವದಂದು ಕಪ್ಪು ಧ್ವಜದ ಬದಲಿಗೆ ತ್ರಿವರ್ಣ ಧ್ವಜ ಹಾರಿತು.

dantewada
ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

By

Published : Jan 27, 2021, 9:05 AM IST

ದಂತೇವಾಡ (ಛತ್ತೀಸ್​ಗಡ): ಇಂದ್ರಾವತಿ ನದಿಗೆ ಅಡ್ಡಲಾಗಿರುವ ಮಾವೋವಾದಿ ಪೀಡಿತ ಪ್ರದೇಶದ ಪಹುನ್‌ಹಾರ್ ಗ್ರಾಮದ ನಿವಾಸಿಗಳು 70 ವರ್ಷಗಳಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ಕಪ್ಪು ಧ್ವಜದ ಬದಲಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಇಂದ್ರಾವತಿ ನದಿಗೆ ಅಡ್ಡಲಾಗಿರುವ ಇಡೀ ಪ್ರದೇಶವು ಮಾವೋವಾದದ ತಾಣವಾಗಿದೆ. ದಂತೇವಾಡದ ಈ ಭಾಗದಲ್ಲಿ ವಾಸಿಸುವ ಜನರು ಸರ್ಕಾರದ ಯೋಜನೆಗಳ ಫಲದಿಂದ ವಂಚಿತರಾಗಿದ್ದಾರೆ. "ಈ ಗ್ರಾಮದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಮಾವೋವಾದಿಗಳು ಯಾವಾಗಲೂ ಗ್ರಾಮಸ್ಥರ ಸಮ್ಮುಖದಲ್ಲಿ ಕಪ್ಪು ಧ್ವಜಗಳನ್ನು ಹಾರಿಸುತ್ತಾರೆ. ಆದರೆ, ಈ ಬಾರಿ ಈ ಘಟನೆ ನಡೆಯದೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ" ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಷೇಕ್ ಪಲ್ಲವ್ ಹೇಳಿದ್ದಾರೆ.

ಈ ಹಿಂದೆ ಇಲ್ಲಿಗೆ ಸವಲತ್ತುಗಳನ್ನು ನೀಡಬೇಕು ಎಂದು ಮುಂದಾದ ಸರ್ಪಂಚ್​ ಪೊಸೆರಾಮ್​ ಅವರು ಸಾವನ್ನಪ್ಪಿದರು. ಆದರೆ, ಅವರ ಪುತ್ರ ಕೇಶವ್ ಕಶ್ಯಪ್ ಅವರು ರಾಷ್ಟ್ರೀಯ ಧ್ವಜವನ್ನು ಹಾರಿಸಲು ನಿರ್ಧರಿಸಿದರು. ಗ್ರಾಮದಲ್ಲಿ ದೇಶಭಕ್ತಿ ಗೀತೆ ಮೊಳಗಿತು. ಇದೇ ವೇಳೆ, ಮಕ್ಕಳಿಗೆ ಅಧ್ಯಯನ ಸಾಮಗ್ರಿಗಳನ್ನು ಮತ್ತು ಅಗತ್ಯ ವಸ್ತುಗಳನ್ನು ಗ್ರಾಮಸ್ಥರಿಗೆ ಎಸ್​ಪಿ ವಿತರಿಸಿದರು. "ಇದು ದಂತೇವಾಡದ ಬದಲಾಗುತ್ತಿರುವ ಮುಖ. ನಗರ, ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಈ ಗ್ರಾಮ ಸಂಪರ್ಕ ಕಲ್ಪಿಸುವಂತಹ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಬದಲಾವಣೆಗಳ ಬಗ್ಗೆ ಜನರು ಖುಷಿಪಟ್ಟಿದ್ದಾರೆ" ಎಂದು ಪಲ್ಲವ್ ಹೇಳಿದರು.

For All Latest Updates

TAGGED:

RUPUBLIC DAY

ABOUT THE AUTHOR

...view details