ನವದೆಹಲಿ: ಲಸಿಕೆ ಬಂದಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಭಾರತದಲ್ಲಿ ಮತ್ತೆ ಕೋವಿಡ್ ಆರ್ಭಟಿಸುತ್ತಿದೆ. ಭಾನುವಾರ ಒಂದೇ ದಿನದಲ್ಲಿ 68,020 ಸೋಂಕಿತರು ಪತ್ತೆಯಾಗಿದ್ದು, 291 ಜನರನ್ನು ವೈರಸ್ ಬಲಿ ಪಡೆದಿದೆ.
ಕರ್ನಾಟಕದ್ದೂ ಸಿಂಹಪಾಲು
ಹೊಸ ಕೇಸ್ಗಳ ಪೈಕಿ ಶೇ.84.5ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಕೇರಳ, ತಮಿಳುನಾಡು ಮತ್ತು ಛತ್ತೀಸ್ಗಢ - ಈ 8 ರಾಜ್ಯಗಳಲ್ಲೇ ವರದಿಯಾಗಿವೆ. ಶೇ.80ರಷ್ಟು ಸಕ್ರಿಯ ಪ್ರಕರಣಗಳು ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿವೆ.
ದೇಶದಲ್ಲೀಗ ಕೊರೊನಾ ಪ್ರಕರಣಗಳ ಸಂಖ್ಯೆ 1,20,39,644, ಸಾವಿನ ಸಂಖ್ಯೆ 1,61,843 ಹಾಗೂ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 5,21,808ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,13,55,993 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.