ಚಮೋಲಿ:ಉತ್ತರಾಖಂಡವನ್ನೇ ಬೆಚ್ಚಿ ಬೀಳಿಸಿದ್ದ ಹಿಮ ದುರಂತದಲ್ಲಿ ಬಲಿಯಾದವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಮತ್ತೆ ಐವರ ಮೃತದೇಹ ಪತ್ತೆ.. ಚಮೋಲಿ ದುರಂತದಲ್ಲಿ ಪ್ರಾಣತೆತ್ತವರ ಸಂಖ್ಯೆ 67ಕ್ಕೆ ಏರಿಕೆ
ಹಿಮ ಪ್ರವಾಹದಿಂದಾಗಿ ಸೃಷ್ಟಿಯಾದ ಕೃತಕ ಸರೋವರದ ಬಳಿ ಸಂವಹನ ನಡಸಲು ಕ್ವಿಕ್ ಡಿಪ್ಲೋಯಬಲ್ ಆ್ಯಂಟೆನಾ (ಕ್ಯೂಡಿಎ)ವನ್ನ ಎಸ್ಡಿಆರ್ಎಫ್ ಅಳವಡಿಸಿದೆ.
ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಹಿಮ ಸ್ಫೋಟಸಿ ಪ್ರವಾಹ ಉಂಟಾಗಿತ್ತು. ಕಳೆದ 15 ದಿನಗಳಿಂದ ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ಅನೇಕ ಅಡೆತಡೆಗಳ ನಡುವೆಯೂ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಲೇ ಇದ್ದು, ಇಂದು ಮತ್ತೆ ಐವರ ಮೃತದೇಹ ಪತ್ತೆಯಾಗಿವೆ.
ಹಿಮ ಪ್ರವಾಹದ ಸಮಯದಲ್ಲಿ ರಿಷಿಗಂಗಾ ನದಿಯ ಮಾರ್ಗ ಮುಚ್ಚಲ್ಪಟ್ಟಿದ್ದು, ಬೃಹತ್ ಮಟ್ಟದ ಕಲ್ಲು, ಮಣ್ಣು ರಿಷಿಗಂಗಾ ನದಿಗೆ ತಡೆಯೊಡ್ಡಿವೆ. ಇದರಿಂದಾಗಿ ಫುಟ್ಬಾಲ್ ಮೈದಾನದ ಮೂರರಷ್ಟು ದೊಡ್ಡದಾದ ಸರೋವರವೊಂದು ನಿರ್ಮಾಣವಾಗಿದೆ. ಸಂವಹನ ನಡಸಲು ಈ ಸರೋವರದ ಬಳಿ ಕ್ವಿಕ್ ಡಿಪ್ಲೋಯಬಲ್ ಆ್ಯಂಟೆನಾ (ಕ್ಯೂಡಿಎ)ವನ್ನ ಎಸ್ಡಿಆರ್ಎಫ್ ಅಳವಡಿಸಿದೆ.