ನವದೆಹಲಿ: ಆರ್‌ಎಸ್‌ಎಸ್ (Rashtriya Swayamsevak Sangh) ಬಾಲ ಗೋಕುಲಂನಂತೆಯೇ, ಕಾಂಗ್ರೆಸ್ ಜವಾಹರ್ ಬಾಲ್ ಮಂಚ್(Jawahar Bal Manch) ಪ್ರಾರಂಭಿಸುವ ಮೂಲಕ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಮುಂದಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಪ್ರಚಾರ ಮಾಡಲು, ಹೊಸ ಪೀಳಿಗೆಯನ್ನು ಆಕರ್ಷಿಸಲು ಕಾಂಗ್ರೆಸ್, 7 ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಜವಾಹರ್ ಬಾಲ್ ಮಂಚ್ ಎಂಬ ಸಂಘಟನೆಯನ್ನು ಆರಂಭಿಸಿದೆ. ಕೆಪಿಸಿಸಿ (ಕೇರಳ ಪ್ರಾದೇಶಿಕ ಕಾಂಗ್ರೆಸ್ ಕಮಿಟಿ) ಕಳೆದ 15 ವರ್ಷಗಳಿಂದ ಈ ಸಂಘಟನೆಯನ್ನು ನಡೆಸುತ್ತಿದೆ.
ಕೇರಳ ಕಾಂಗ್ರೆಸ್ ಘಟಕವು ಕಳೆದ 15 ವರ್ಷಗಳಿಂದ ಸಂಘಟನೆಯನ್ನು ನಡೆಸುತ್ತಿದೆ. ಹೊಸದಾಗಿ ರಚಿಸಲಾಗಿರುವ ಜವಾಹರ್ ಬಾಲ್ ಮಂಚ್ ಸಂಘಟನೆಗೆ ಕೇರಳ ಕಾಂಗ್ರೆಸ್ ನಾಯಕ ಜಿ.ವಿ. ಹರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹರಿ, ಕೇರಳ ಕಾಂಗ್ರೆಸ್ ಕಳೆದ 15 ವರ್ಷಗಳಿಂದ ಜವಾಹರ್ ಬಾಲ್ ಮಂಚ್ಅನ್ನು ನಡೆಸುತ್ತಿದೆ. ಈವರೆಗೆ ಎರಡೂವರೆ ಲಕ್ಷ ಮಕ್ಕಳಿಗೆ ತರಬೇತಿ ನೀಡಲಾಗಿದೆ. ರಾಜ್ಯಮಟ್ಟದ ಈ ಕಾರ್ಯಕ್ರಮ ಯಶಸ್ಸು ಕಂಡಿದ್ದರಿಂದ, ರಾಷ್ಟ್ರಮಟ್ಟಕ್ಕೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತಿದೆ.
ಶಿಬಿರಗಳು, ಕಾರ್ಯಾಗಾರಗಳು, ಸೆಮಿನಾರ್‌ಗಳು ಮತ್ತು ದೈಹಿಕ ತರಬೇತಿಯ ಮೂಲಕ ಮಕ್ಕಳಿಗೆ ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಪಕ್ಷದ ಕೊಡುಗೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ‘ತಾಲಿಬಾನಿ ಬಿಜೆಪಿ’ ಭಾರತದಲ್ಲಿ ಆಳ್ವಿಕೆ ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ
ಮಕ್ಕಳಿಗೆ ತರಬೇತಿ ನೀಡುವ ಆರ್‌ಎಸ್‌ಎಸ್ ಸಂಘಟನೆಗಿಂತ ಜವಾಹರ್ ಬಾಲ್ ಮಂಚ್ ಹೇಗೆ ಭಿನ್ನವಾಗಿರುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂಲಭೂತ ವ್ಯತ್ಯಾಸವೆಂದರೆ ಜಾತ್ಯತೀತತೆ ಎಂದರು. ಆ್ಯಪ್ ಮೂಲಕ ಮಕ್ಕಳು ಈ ಅಭಿಯಾನಕ್ಕೆ ಆನ್‌ಲೈನ್‌ನಲ್ಲಿ ಸೇರಬಹುದು.