ಪಶ್ಚಿಮ ಬಂಗಾಳ/ಕೋಲ್ಕತ್ತಾ:ಟಾಲಿಗಂಜ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಗಾಯಕ ಕಮ್ ರಾಜಕಾರಣಿ ಮತ್ತು ಕೇಂದ್ರ ಸಚಿವ ಬಬೂಲ್ ಸುಪ್ರಿಯೋ ಮೇಲೆ ಸೋಮವಾರ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.
ಬಬೂಲ್ ಸುಪ್ರಿಯೋ ಮೇಲೆ ಹಲ್ಲೆ ನಾಮಪತ್ರ ಸಲ್ಲಿಸುವ ಕಚೇರಿ ಬಳಿ ಜಮಾಯಿಸಿದ ಟಿಎಂಸಿ ಬೆಂಬಲಿಗರು ಸುಪ್ರಿಯೋ ಅವರಿಗೆ ಬೆದರಿಕೆ ಮಾತುಗಳನ್ನಾಡಿದರಲ್ಲದೇ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದರು. ಈ ವರ್ಷ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಣಕ್ಕಿಳಿದ ಐವರು ಸಂಸದರಲ್ಲಿ ಸುಪ್ರಿಯೋ ಒಬ್ಬರಾಗಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರಿಯೋ, ಮಮತಾ ಬ್ಯಾನರ್ಜಿ ತನ್ನ ಜನರನ್ನು ಈ ಸ್ಥಳಕ್ಕೆ ಕಳುಹಿಸುವ ಮೂಲಕ ಮತ್ತೆ ತನ್ನ ಸಣ್ಣ ಮನಸ್ಥಿತಿಯನ್ನು ತೋರಿಸಿದ್ದಾರೆ ಎಂದು ಹೇಳಿದರು. ನಾನು ಭಾರತೀಯ. "ಯಾವುದೇ ಸಂದರ್ಭದಲ್ಲಿ, ನಾನು ಎಲ್ಲಿ ನಿಲ್ಲುತ್ತೇನೆ ಎಂಬುದು ನನ್ನ ಪಕ್ಷಕ್ಕೆ ಸೇರಿದ ವಿಷಯ. ಟಿಎಂಸಿ ತನ್ನ ಪಕ್ಷದ ವಿಚಾರಗಳ ಬಗ್ಗೆ ಗಮನ ನೀಡಲಿ ಎಂದು ಹೇಳಿದ್ರು.
ಇದನ್ನೂ ಓದಿ:ಬಿಜೆಪಿ ನವನೀತ್ ರಾಣಾಗೆ ಶಿವಸೇನೆ ಸಂಸದನ ಧಮ್ಕಿ: ರಕ್ಷಣೆಗಾಗಿ ಪತ್ರ ಬರೆದ ಸಂಸದೆ!