ಅಮರಾವತಿ(ಮಹಾರಾಷ್ಟ್ರ): ಕಿತ್ತಳೆ ಹಣ್ಣಿಗೆ ವಿದರ್ಭ ಪ್ರದೇಶ ಅಂದರೆ ಮಹಾರಾಷ್ಟ್ರದ ನಾಗಪುರ ಮತ್ತು ಅಮರಾವತಿ ಒಳಗೊಂಡ ಹೆಸರುವಾಸಿ. ಇಲ್ಲಿನ ಕಿತ್ತಳೆ ಬೆಳೆಗಾರರು ಹಲವು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಿತ್ತಳೆ ಕೃಷಿ ವಿನಾಶದ ಅಂಚಿನಲ್ಲಿದೆ.
ಕಿತ್ತಳೆ ಹಣ್ಣು ಬೆಳೆದ ರೈತರು ಸಾವಿರಾರು ಕ್ವಿಂಟಲ್ ಹಣ್ಣನ್ನು ರಸ್ತೆಗೆ ಸುರಿದಿದ್ದಾರೆ. ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕಿತ್ತಳೆ ಮರಗಳ ಕಾಂಡಕ್ಕೆ ಶಿಲೀಂಧ್ರ ರೋಗ ತಗುಲಿದೆ. ಇದರಿಂದ ಕಿತ್ತಳೆ ಹಣ್ಣುಗಳು ಮರದಿಂದ ಉದುರಲಾರಂಭಿಸಿವೆ.
ಕಿತ್ತಳೆ ಬೆಳೆಗಾರರ ಪರಿಸ್ಥಿತಿ ಇದರ ಜೊತೆಗೆ ಕಿತ್ತಳೆ ತೋಟಗಳಿಂದ ಮಾರುಕಟ್ಟೆಗೆ ತಲುಪುವ ಹಾಗೂ ಸುರಕ್ಷಿತ ರಸ್ತೆಗಳಿಗೆ ತಲುಪುವ ರಸ್ತೆಗಳೂ ಕೂಡಾ ಸಂಪೂರ್ಣ ಕೆಸರು ಮಯವಾಗಿದ್ದು, ಅವುಗಳನ್ನು ಯಾವ ರೀತಿಯಲ್ಲಿ ಮಾರುಕಟ್ಟೆಗೆ ಸಾಗಿಸಬೇಕು ಎಂಬುದು ರೈತರನ್ನು ಕಾಡುತ್ತಿದೆ.
ಕಿತ್ತಳೆ ವ್ಯಾಪಾರಿಗಳೂ ಕೂಡಾ ಈಗ ಕಿತ್ತಳೆ ಕೊಳ್ಳಲು ಮುಂದಾಗುತ್ತಿಲ್ಲ ಎಂಬುದೂ ಕೂಡಾ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ದೀಪಾವಳಿ ಹಬ್ಬಕ್ಕೆ ರೈತರ ಬಾಳಿಗೆ ಬೆಳಕಾಗಬೇಕಿದ್ದ ಕಿತ್ತಳೆ, ಅಂಧಕಾರ ಮೂಡಿಸುವಂತಿದೆ. ಸಾಕಷ್ಟು ಬೆಳೆಗಾರರು ಈಗಾಗಲೇ ಕಿತ್ತಳೆಯನ್ನು ರಸ್ತೆಗೆ ಸುರಿದಿದ್ದು, ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿನಿ ಕೊಲೆ ಮಾಡಿ ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಹೋದ ಕಿರಾತಕರು