ನವದೆಹಲಿ: ಕೊರೊನಾ ಮೂರನೆ ಅಲೆಯ ಭಯದಲ್ಲಿರುವ ದೇಶದ ಜನತೆಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೂರನೇ ಅಲೆಯು ಎರಡನೇ ಅಲೆಗಿಂತ ಅಪಾಯಕಾರಿಯಾಗಿರುವ ಸಾಧ್ಯತೆ ಕಡಿಮೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಅಭಿಪ್ರಾಯ ವ್ಯಕ್ತಪಡಿಸಿದೆ.
'ಭಾರತದಲ್ಲಿ ಮೂರನೇ ಅಲೆಯ ಸಾಧ್ಯತೆ: ಗಣಿತ ಮಾದರಿ ಆಧಾರಿತ ವಿಶ್ಲೇಷಣೆ' ಎಂಬ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಶುಕ್ರವಾರ ಪ್ರಕಟಿಸಿದ್ದು, ಈ ವರದಿಯಲ್ಲಿ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯ ಅಪಾಯದ ಮಟ್ಟ ಕಡಿಮೆ ಎಂದು ಮಾಹಿತಿ ನೀಡಿದೆ.
ಈ ಅಧ್ಯಯನದಲ್ಲಿ ಮೂರನೇ ಅಲೆ ಹೇಗೆ ಸಂಭವಿಸುತ್ತದೆ ಎಂದು ವಿಶ್ಲೇಷಿಸುತ್ತದೆ. ಆದರೂ ವ್ಯಾಕ್ಸಿನೇಷನ್ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಮತ್ತಷ್ಟು ಅಪಾಯವನ್ನು ತಪ್ಪಿಸುವ ಏಕೈಕ ಮಾರ್ಗ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.